ಚೀನಾದಲ್ಲಿ ಪ್ರತಿ ದಿನ 10 ಲಕ್ಷ ಕೇಸ್, 5000 ಸೋಂಕಿತರ ಸಾವು

Public TV
1 Min Read
china corona covid virus

– ಮಾರ್ಚ್ ವೇಳೆಗೆ ನಿತ್ಯ 42 ಲಕ್ಷ ಕೇಸ್

ಬೀಜಿಂಗ್‌: ಚೀನಾದಲ್ಲಿ(China) ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ದಿನಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೆ(Corona Virus) ತುತ್ತಾಗುತ್ತಿದ್ದು, ಪ್ರತಿ ದಿನ 5 ಸಾವಿರಕ್ಕೂ ಹೆಚ್ಚು ಸಾವು ಸಂಭವಿಸುತ್ತಿದೆ ಎಂದು ಲಂಡನ್ ಮೂಲದ ಅನಾಲಿಟಿಕ್ಸ್ ಸಂಸ್ಥೆ ಹೇಳಿದೆ.

ಏರ್‌ಫಿನಿಟಿ ಲಿ ಸಂಸ್ಥೆಯ ಪ್ರಕಾರ ಚೀನಾದಲ್ಲಿ ಈಗ ಪ್ರತಿದಿನ 10 ಲಕ್ಷ ಸೋಂಕಿತರು ಪತ್ತೆಯಾಗುತ್ತಿದ್ದು, ಜನವರಿಯಲ್ಲಿ ಇದು 37 ಲಕ್ಷಕ್ಕೆ, ಮಾರ್ಚ್ ವೇಳೆಗೆ ಪ್ರತಿನಿತ್ಯ 42 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಿದೆ. ಜಗತ್ತಿನ ಯಾವುದೇ ದೇಶದಲ್ಲಿ ಈ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿಲ್ಲ ಎಂದು ತಿಳಿಸಿದೆ.

 

141 ಕೋಟಿ ಜನ ಸಂಖ್ಯೆ ಇರುವ ಚೀನಾ ಇಲ್ಲಿಯವರೆಗೂ ಅಧಿಕೃತ ಕೊರೊನಾ ಪಾಸಿಟಿವ್‌, ಸಾವಿನ ಸಂಖ್ಯೆ ನೀಡಿಲ್ಲ. ಆದರೆ ಚೀನಾದ ಪ್ರಾಂತ್ಯಗಳ ಸ್ಥಳೀಯ ವರದಿಯನ್ನು ಕಲೆಹಾಕಿ ಇಡೀ ದೇಶದಲ್ಲಿ ನಿತ್ಯ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆಯನ್ನು ಅಂದಾಜಿಸಿ ಏರ್‌ಫಿನಿಟಿ ಸಂಸ್ಥೆ ಈ ವರದಿ ಪ್ರಕಟಿಸಿದೆ. ಇದನ್ನೂ ಓದಿ: ಮಹಿಳೆಯರ ಶಿಕ್ಷಣಕ್ಕೆ ತಾಲಿಬಾನ್ ನಿಷೇಧ – ಪ್ರತಿಭಟನೆಗೆ ಪರೀಕ್ಷೆಯಿಂದಲೇ ಹೊರನಡೆದ ಅಫ್ಘನ್ ಯುವಕರು

ಚೀನಾದ ಪ್ರಮುಖ ನಗರ ಶಾಂಘೈನಲ್ಲೇ(Shanghai) ಒಟ್ಟು 54 ಲಕ್ಷ ಮಂದಿಗೆ ಕೊರೊನಾ ಬಂದಿದೆ. ಈ ಕಾರಣಕ್ಕೆ ಶಾಂಘೈ ಆಸ್ಪತ್ರೆ, ನಗರದಲ್ಲಿ 2.5 ಕೋಟಿ ಜನರು ಕೋವಿಡ್‌ಗೆ ತುತ್ತಾಗಲಿದ್ದಾರೆ. ನಮ್ಮ ಬಳಿ ಯಾವುದೇ ಆಯ್ಕೆ ಇಲ್ಲ. ಕೋವಿಡ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದುರಂತದ ಯುದ್ಧಕ್ಕೆ ಸಿದ್ದರಾಗಿ ಎಂದು ಎಚ್ಚರಿಕೆ ನೀಡಿದೆ.

ಕೊರೊನಾ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಏರಿಕೆ ಆಗುತ್ತಿದ್ದಂತೆ ಚೀನಾ ಮತ್ತೆ ಕಳ್ಳಾಟ ಆರಂಭಿಸಿದೆ. ಮೃತಪಟ್ಟವರು ಎಲ್ಲಾ ಕೊರೊನಾದಿಂದ ಸಾವನ್ನಪ್ಪಿಲ್ಲ. ಅವರು ಬೇರೆ ಬೇರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಆ ಸಂಖ್ಯೆಯನ್ನು ಕೊರೊನಾ ಸಾವನ್ನಪ್ಪಿದವರ ಸಂಖ್ಯೆಯ ಜೊತೆ ಸೇರಿಸುವ ಅಗತ್ಯವಿಲ್ಲ ಎಂದು ಹೇಳಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *