ಬೀಜಿಂಗ್: ಚೀನಾ ಸರ್ಕಾರ ಸೋಮವಾರ ರಾತ್ರಿ ವಾಟ್ಸಪ್ ಸೇವೆಯನ್ನು ತಡೆಹಿಡಿದಿದೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.
ಇಂಟರ್ ನೆಟ್ ಜಗತ್ತಿನ ಆಗುಹೋಗುಗಳ ಬಗ್ಗೆ ಕಣ್ಗಾವಲು ಇಡಲು ಚೀನಾ ಸ್ಥಾಪಿಸುವ ಓಪನ್ ಒಬ್ಸರ್‍ವೆಟರಿ ಆಫ್ ನೆಟ್‍ವರ್ಕ್ ಇಂಟರ್ ಫೇಸ್(ಒಒಎನ್‍ಐ) ಸಲಹೆಯ ಹಿನ್ನೆಲೆಯಲ್ಲಿ ಸೋಮವಾರದಿಂದ ವಾಟ್ಸಪ್ ಸೇವೆಯನ್ನು ತಡೆಹಿಡಿಯಲಾಗಿದೆ ಎನ್ನಲಾಗಿದೆ.
Advertisement
ಚೀನಾ ಸರ್ಕಾರ ಈ ವರ್ಷ ಆನ್‍ಲೈನ್ ನೀತಿಗಳನ್ನು ಬಿಗಿಗೊಳಿಸಿದ್ದು, ಟೆಕ್ ಕಂಪೆನಿಗಳು ಕಡ್ಡಾಯವಾಗಿ ಬಳಕೆದಾರರ ಮಾಹಿತಿನ್ನು ದೇಶದ ಒಳಗಡೆ ಸಂಗ್ರಹಿಸಬೇಕು. ಅಷ್ಟೇ ಅಲ್ಲದೇ ಕೆಲವೊಂದು ವಿಚಾರಗಳಿಗೆ ನಿರ್ಬಂಧ ಹೇರಿದೆ.
Advertisement
ವಿಶ್ವದ ನಂಬರ್ ಒನ್ ಮೆಸೆಂಜಿಗ್ ಅಪ್ಲಿಕೇಶನ್ ವಾಟ್ಸಪ್ ತಡೆ ಹಿಡಿಯಲು ನಿರ್ಧಿಷ್ಟ ಕಾರಣ ಏನು ಎಂದು ತಿಳಿದು ಬಂದಿಲ್ಲ. ಟ್ವಿಟ್ಟರ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಮತ್ತು ಗೂಗಲ್ ಸೇವೆಯನ್ನು ಚೀನಾ ಈಗಾಗಲೇ ಬ್ಲಾಕ್ ಮಾಡಿದೆ.
Advertisement
ಈ ಹಿಂದೆ ಚೀನಾ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಿಚಾಟ್ ಚೀನಾ ಸರ್ಕಾರ ಮಾಹಿತಿ ಕೇಳಿದರೆ ಮಾಹಿತಿ ನೀಡಲಾಗುವುದು ಎಂದು ಬಳಕೆದಾರರಿಗೆ ತಿಳಿಸಿತ್ತು.