ಬೀಜಿಂಗ್: ಚೀನಾದ ನೈಋತ್ಯ ಹಾಗೂ ವಾಯವ್ಯ ಭಾಗಗಳಲ್ಲಿ ಪ್ರವಾಹ ಉಂಟಾಗಿದ್ದು, ಇಲ್ಲಿಯವರೆಗೆ 12 ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ನೆರೆಯಿಂದಾಗಿ ಪರದಾಡುವಂತಾಗಿದ್ದು, ಅವರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
ಚೀನಾದ ನೈಋತ್ಯ ಭಾಗದ ಸಿಂಚುವಾನ್‌ನಲ್ಲಿ ಧಾರಾಕಾರ ಮಳೆಯಿಂದಾಗಿ ಹಠಾತ್ತನೆಯ ಪ್ರವಾಹ ಉಂಟಾಗಿದೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ. ನೆರೆ ಪೀಡಿತ ಪ್ರದೇಶದಿಂದ ಸುಮಾರು 1,300 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕಬ್ಬಿನ ಲಾರಿ ಅಡ್ಡಗಟ್ಟಿ ಕಬ್ಬು ತಿಂದ ಆನೆ, ಮರಿಯಾನೆ
Advertisement
Advertisement
ಇದರ ನಡುವೆಯೇ ವಾಯುವ್ಯ ಭಾಗದ ಲಾಂಗ್ನಾನ್ ನಗರದಲ್ಲಿ ಪ್ರವಾಹದಿಂದಾಗಿ 6 ಜನ ಸಾವನ್ನಪ್ಪಿದ್ದು, 3,000 ಜನರನ್ನು ಸ್ಥಳಾಂತರಿಸಲಾಗಿದೆ. ಕಳೆದ ಒಂದೂವರೆ ದಿನದಲ್ಲಿ 98.9 ಮಿ.ಮೀ ನಷ್ಟು ಮಳೆಯಾಗಿದೆ ಎಂದು ತಿಳಿಸಿವೆ.
Advertisement
ಪೂರ್ವದ ಝೆಜಿಯಾಂಗ್, ಶಾಂಘೈ ನಗರ ಸೇರಿದಂತೆ ಚೀನಾದ ಕೆಲವು ಭಾಗಗಳಲ್ಲಿ ತಾಪದ ವಾತಾವರಣದ ನಡುವೆಯೂ ಮಳೆ ಬರುತ್ತಿದೆ. ಕಳೆದ ವಾರ 42 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಏರಿಕೆಯಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಅಥಣಿಯಲ್ಲಿ ಸಿಕ್ಕ ವಿಶಿಷ್ಟವಾದ ಪುನುಗು ಬೆಕ್ಕು – ಚಿರತೆ ಅಂತ ಭಯ ಪಟ್ಟ ಜನ
Advertisement
ಹವಾಮಾನ ಬದಲಾವಣೆಯಿಂದಾಗಿ ಇಂತಹ ವೈಪರೀತ್ಯಗಳು ಹೆಚ್ಚು ಸಂಭವಿಸುತ್ತಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಬೆಚ್ಚಗಿನ ಗಾಳಿ ಹೆಚ್ಚು ನೀರನ್ನು ಸಂಗ್ರಹಿಸುತ್ತದೆ. ಅದು ಬಿಡುಗಡೆಯಾದಾಗ ದೊಡ್ಡ ಮಟ್ಟದಲ್ಲಿ ಮೇಘಸ್ಫೋಟಗಳಾಗುತ್ತವೆ ಎಂದಿದ್ದಾರೆ.