ಬೀಜಿಂಗ್: 132 ಜನರನ್ನು ಬಲಿ ಪಡೆದ ಚೀನಾ ವಿಮಾನ ದುರಂತ ಉದ್ದೇಶಪೂರ್ವಕ ಎಂದು ಅಮೆರಿಕದ ಮಾಧ್ಯಮ ವರದಿ ಮಾಡಿದೆ.
ವಿಮಾನ ಪತನಗೊಂಡ ಸ್ಥಳದಲ್ಲಿ ಸಿಕ್ಕ ಬ್ಲಾಕ್ಬಾಕ್ಸ್ನಿಂದ ಈ ಮಾಹಿತಿ ಪತ್ತೆಯಾಗಿದೆ ಎಂದು ಅಮೆರಿಕದ ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಇದನ್ನೂ ಓದಿ: ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?
Advertisement
Advertisement
ಕಳೆದ ಮಾರ್ಚ್ ಚೀನಾದ ಈಸ್ಟರ್ನ್ ಜೆಟ್ ಕಂಪನಿಗೆ ಸೇರಿದ ವಿಮಾನ ಇಲ್ಲಿನ ಗುವಾಂಗ್ಸಿ ಪ್ರದೇಶದಲ್ಲಿ ಪತನಗೊಂಡು 132 ಜನರು ಮೃತಪಟ್ಟಿದ್ದರು. ಈ ವೇಳೆ ಪೈಲಟ್ ತಪ್ಪಿನಿಂದಾಗಿ ಅಥವಾ ಆತ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ವಿಮಾನವನ್ನು ಉದ್ದೇಶಪೂರ್ವಕವಾಗಿಯೇ ಪತನಗೊಳಿಸಿರಬಹುದು ಎಂಬ ವಾದಗಳು ಹುಟ್ಟಿಕೊಂಡಿದ್ದವು. ಇದೀಗ ಅಮೆರಿಕ ತಜ್ಞರ ವರದಿ ಈ ಕುರಿತು ಸ್ಪಷ್ಟನೆ ನಿಡಿದೆ.
Advertisement
ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್ಪಿಟ್ ಧ್ವನಿ ರೆಕಾರ್ಡರ್ ಅನ್ನು ಈಗಾಗಲೇ ಪರೀಕ್ಷೆಗಾಗಿ ಕಳುಹಿಸಲಾಗಿದೆ. 30 ದಿನಗಳಲ್ಲಿ ಪ್ರಾಥಮಿಕ ವರದಿಗಳು ಬರಬಹುದು ಎಂದು ಅಧಿಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: 133 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ
Advertisement
Crash site pic.twitter.com/8qJWYK8FhS
— ChinaAviationReview (@ChinaAvReview) March 21, 2022
ಏನಿದು ಘಟನೆ?: ಕಳೆದ ಮಾರ್ಚ್ 21ರಂದು 133 ಜನರಿದ್ದ ಚೈನಾ ಈಸ್ಟರ್ನ್ ಏರ್ಲೈನ್ಸ್ ಬೋಯಿಂಗ್-737 ವಿಮಾನವು ದಕ್ಷಿಣ ಪ್ರಾಂತ್ಯದ ಗುವಾಂಗ್ಸಿಯಲ್ಲಿ ಪತನಗೊಂಡಿತ್ತು. ವಿಮಾನ ಬಿದ್ದ ರಭಸಕ್ಕೆ ಪರ್ವತದ ಅರಣ್ಯ ಪ್ರದೇಶ ಹೊತ್ತಿ ಉರಿದಿತ್ತು. ವಿಮಾನ ಪರ್ವತಕ್ಕೆ ಅಪ್ಪಳಿಸಿದೆ. ಪರಿಣಾಮವಾಗಿ ಪರ್ವತದ ಪ್ರದೇಶವೆಲ್ಲಾ ಬೆಂಕಿಗಾಹುತಿಯಾಗಿತ್ತು.
A China Eastern Airlines Boeing 737-800 operating flight MU5735 has reportedly crashed near Wuzhou in southern China. Initial reports say 133 onboard.https://t.co/iipgQYGkhK
— WLVN🔍 (@TheLegateIN) March 21, 2022
ಶಾಂಘೈ ಮೂಲದ ಚೈನಾ ಈಸ್ಟರ್ನ್, ಚೀನಾದ ಪ್ರಮುಖ ಮೂರು ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ. ವಿಮಾನ ಟ್ಯಾಕಿಂಗ್ ವೆಬ್ಸೈಟ್ `ಫ್ಲೈಟ್ ರೇಡರ್-24′ ಮಾಹಿತಿ ಪ್ರಕಾರ, ಕುನ್ಮಿಂಗ್ನಿಂದ ಗುವಾಂಗ್ಝೌಗೆ ಪ್ರಯಾಣಿಸುತ್ತಿದ್ದ ಎಂಯು 5735 ವಿಮಾನ ಅಪಘಾತಕ್ಕೀಡಾಗಿತ್ತು. ಲ್ಯಾಂಡಿಂಗ್ ಆಗಲು ಸಿದ್ಧವಾಗುತ್ತಿದ್ದ ಸಂದರ್ಭದಲ್ಲಿ ವೇಗ ಕಳೆದುಕೊಂಡು ಪತನಗೊಂಡಿತ್ತು.