ಟೋಕಿಯೋ: ಅಮೆರಿಕದ ಅಧಿಕಾರಿಗಳ ತೈವಾನ್ ಭೇಟಿಯನ್ನು ಚೀನಾ ತಡೆಯುವುದರಿಂದ ನಮ್ಮನ್ನು ಪ್ರತ್ಯೇಕಿಸಲು ಅದಕ್ಕೆ ಸಾಧ್ಯವೇ ಇಲ್ಲ ಎಂದು ಅಮೆರಿಕ ಹೌಸ್ ಆಫ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಶುಕ್ರವಾರ ತಿಳಿಸಿದ್ದಾರೆ.
ಸಿಂಗಾಪುರ, ಮಲೇಷ್ಯಾ, ತೈವಾನ್ ಮತ್ತು ದಕ್ಷಿಣ ಕೊರಿಯಾಗೆ ಭೇಟಿ ನೀಡಿದ ಬಳಿಕ ಪೆಲೋಸಿ ಮತ್ತು ಇತರ ಐವರು ಕಾಂಗ್ರೆಸ್ ಸದಸ್ಯರು ಗುರುವಾರ ತಡರಾತ್ರಿ ಟೋಕಿಯೊಗೆ ಆಗಮಿಸಿದರು. ಏಷ್ಯಾ ಪ್ರವಾಸದ ಅಂತಿಮ ಹಂತದಲ್ಲಿರುವ ಪೆಲೋಸಿ ಶುಕ್ರವಾರ, ಚೀನಾಗೆ ನಮ್ಮ ತೈವಾನ್ ಭೇಟಿಯನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿಕೆ ನೀಡಿದರು.
Advertisement
Advertisement
25 ವರ್ಷಗಳಲ್ಲೇ ತೈವಾನ್‌ಗೆ ಭೇಟಿ ನೀಡಿದ ಮೊದಲ ಹೌಸ್ ಸ್ಪೀಕರ್ ಪೆಲೋಸಿ ಬುಧವಾರ ತೈವಾನ್‌ನ ತೈಪೆಯಲ್ಲಿ ಮಾತನಾಡಿ, ಸ್ವ-ಆಡಳಿತ ದ್ವಿಪಕ್ಷದಲ್ಲಿ ಹಾಗೂ ಬೇರೆಡೆಗಳಲ್ಲೂ ಅಮೆರಿಕದ ಪ್ರಜಾಪಭುತ್ವದ ಬದ್ಧತೆ ಕಬ್ಬಿಣದ ಕವಚವಾಗಿ ಉಳಿದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Commonwealth Games: 44 ವರ್ಷಗಳ ಬಳಿಕ ಬೆಳ್ಳಿ ಗೆದ್ದು ಸಾಧನೆ ಮಾಡಿದ ಮುರಳಿ
Advertisement
ತೈವಾನ್ ತಮ್ಮದೇ ದೇಶದ ಭಾಗ ಎಂದು ವಾದಿಸುವ ಚೀನಾ ಅಗತ್ಯವಿದ್ದರೆ ಬಲವಂತವಾಗಿ ಅದನ್ನು ಸ್ವಾಧೀನಪಡಿಸಿಕೊಳ್ಳುವುದಾಗಿಯೂ ಬೆದರಿಕೆ ಹಾಕಿದೆ. ಇದರ ನಡುವೆಯೇ ಅಮೆರಿಕ ಸ್ಪೀಕರ್‌ನ ತೈವಾನ್ ಭೇಟಿ ಚೀನಾವನ್ನು ಕೆರಳಿಸಿದೆ. ಈ ಹಿನ್ನೆಲೆ ಚೀನಾ ಗುರುವಾರ ತೈವಾನ್ ಸುತ್ತಮುತ್ತಲಿನ 6 ವಲಯಗಳಲ್ಲಿ ಗುಂಡಿನ ದಾಳಿ ಸೇರಿದಂತೆ ಮಿಲಿಟರಿ ಅಭ್ಯಾಸಗಳನ್ನು ಪ್ರಾರಂಭಿಸಿತ್ತು.
Advertisement
ಈ ಬಗ್ಗೆ ಮಾತನಾಡಿದ ಜಪಾನಿನ ಪ್ರಧಾನ ಮಂತ್ರಿ ಫ್ಯೂಮಿಯೋ ಕಿಶಿಡಾ, ತೈವಾನ್ ಅನ್ನು ಗುರಿಯಾಗಿಸಿ ಚೀನಾ ನಡೆಸಿರುವ ಮಿಲಿಟರಿ ವ್ಯಾಯಾಮ ಗಂಭೀರ ಸಮಸ್ಯೆಯಾಗಿದೆ. ಅಭ್ಯಾಸದ ಭಾಗವಾಗಿ ಜಪಾನಿನ ಕಡೆಗೂ 5 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದ್ದು, ಇದು ಪ್ರಾದೇಶಿಕ ಶಾಂತಿ ಹಾಗೂ ಭದ್ರತೆಗೆ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಮನ್‌ವೆಲ್ತ್ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಸುಧೀರ ಸಾಧನೆ – ಭಾರತಕ್ಕೆ ಚಿನ್ನದ ಹೊಳಪು