ಬೀಜಿಂಗ್: ಚೀನಾದಲ್ಲಿ ಕೊರೊನಾ ಪದೇ ಪದೇ ಕಾಟ ಕೊಡುತ್ತಿದೆ. ಇದರಿಂದಾಗಿ ಇದೀಗ 10,000 ಶಾಶ್ವತ ಕೊರೊನಾ ಟೆಸ್ಟಿಂಗ್ ಸೆಂಟರ್ ತೆರೆಯಲು ಚೀನಾ ಸರ್ಕಾರ ನಿರ್ಧರಿಸಿದೆ.
Advertisement
ಶಾಂಘೈ ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದಂತೆ ರ್‍ಯಾಂಡಮ್ ಟೆಸ್ಟ್‌ಗೆ ಸ್ಥಳೀಯಾಡಳಿತ ನಿರ್ಧರಿಸಿತು. ಆ ಬಳಿಕ ಶಾಂಘೈಯಲ್ಲಿ ಲಾಕ್‍ಡೌನ್ ಮಾಡಲಾಗಿತ್ತು. ಈ ವೇಳೆ 9,000 ಕೊರೊನಾ ಟೆಸ್ಟಿಂಗ್ ಸೆಂಟರ್‌ಗಳನ್ನು ತೆರೆಯಲಾಗಿತ್ತು. ಆ ಬಳಿಕ ಇದೀಗ ಶಾಂಘೈಯಲ್ಲಿ ಲಾಕ್‍ಡೌನ್ ತೆರವುಗೊಳಿಸಲಾಗಿದೆ. ಕೇಸ್‍ಗಳ ಸಂಖ್ಯೆ ಇಳಿಕೆ ಕಾಣುತ್ತಿದೆ. ಇದನ್ನೂ ಓದಿ: ದಂಪತಿಗೆ ಮೂರನೇ ಮಗುವಾದರೆ 11 ಲಕ್ಷ ರೂ. ಆಫರ್ ನೀಡಿದ ಖಾಸಗಿ ಕಂಪನಿ
Advertisement
Advertisement
ಶಾಂಘೈನಲ್ಲಿ 25 ಸಾವಿರಕ್ಕೂ ಹೆಚ್ಚು ವಸತಿ ಸಮುಚ್ಚಯಗಳನ್ನು ಲಾಡ್‍ಡೌನ್ ಮಾಡಿ ಕೊರೊನಾ ನಿಯಂತ್ರಿಸಲಾಗಿತ್ತು. ಈ ವೇಳೆ ಪ್ರತಿದಿನ ಕೊರೊನಾ ಆರ್‌ಟಿಪಿಸಿಆರ್ ಟೆಸ್ಟ್ ನಡೆಸಲು ಜನರಿಗೆ ಸೂಚನೆ ನೀಡಲಾಗಿತ್ತು. ಹಾಗಾಗಿ 9,000 ಕೊರೊನಾ ಟೆಸ್ಟಿಂಗ್ ಸೆಂಟರ್ ತೆರಯಲಾಗಿತ್ತು. ಇದೀಗ 5,000 ಟೆಸ್ಟಿಂಗ್ ಸೆಂಟರ್‌ಗಳು ಕಾರ್ಯಾಚರಿಸುತ್ತಿದೆ. ಚೀನಾದಲ್ಲಿ ಶೂನ್ಯ ಕೊರೊನಾ ಪ್ರಕರಣಕ್ಕೆ ಪಣ ತೊಟ್ಟಿರುವ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇದನ್ನೂ ಓದಿ: ಬೇಡ ಎಂದರೂ ಬಿಡ್ಲಿಲ್ಲ, ನೆಲಕ್ಕೆ ಕೆಡವಿ ಮಹಿಳೆಗೆ ಕೋವಿಡ್ ಪರೀಕ್ಷೆ – ವೀಡಿಯೋ ವೈರಲ್
Advertisement
ಈಗಾಗಲೇ ಜನ ಸಾಮಾನ್ಯರು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಕ್ಕೂ ಮುನ್ನ ಕೊರೊನಾ ಟೆಸ್ಟ್ ಕಡ್ಡಾಯ ಎಂಬ ನಿಯಮ ಜಾರಿ ಮಾಡಲಾಗಿದೆ. ರೈಲು, ಪಾರ್ಕ್, ರಸ್ತೆ, ಮೆಟ್ರೋ, ಶಾಲೆ, ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೇವಲ 15 ನಿಮಿಷಗಳಲ್ಲಿ ಟೆಸ್ಟಿಂಗ್ ನಡೆಸುವ ಕಾರ್ಯ ಚೀನಾದಲ್ಲಿ ನಡೆಯುತ್ತಿದೆ. ಪ್ರಸ್ತುತ ಕಾರ್ಯಾಚರಿಸುತ್ತಿರುವ 9,000 ಟೆಸ್ಟಿಂಗ್ ಸೆಂಟರ್ ಜೊತೆಗೆ 1,000 ನೂತನ ಸೇರಿ ಒಟ್ಟು 10,000 ಶಾಶ್ವತ ಕೊರೊನಾ ಟೆಸ್ಟಿಂಗ್ ಸೆಂಟರ್‌ಗಳನ್ನು ನಗರದೆಲ್ಲೆಡೆ ತೆರೆಯಲು ಸರ್ಕಾರ ತೀರ್ಮಾನಿಸಿದೆ.