ಬೀಜಿಂಗ್: ಇನ್ನು ಮುಂದೆ ಚೀನಾದಲ್ಲಿ ಸದ್ದಾಂ, ಇಸ್ಲಾಂ ಸೇರಿ ಡಜನ್‍ಗಟ್ಟಲೇ ಇಸ್ಲಾಂ ಹೆಸರುಗಳನ್ನು ಶಿಶುಗಳಿಗೆ ಇಡುವಂತಿಲ್ಲ.
ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕ್ಸಿನ್‍ಜಿಯಾಂಗ್ ಪ್ರಾಂತ್ಯದಲ್ಲಿ ಡಜನ್‍ಗಟ್ಟಲೇ ಇಸ್ಲಾಮಿಕ್ ಹೆಸರುಗಳನ್ನು ಮಕ್ಕಳಿಗೆ ಇಡುವುದನ್ನು ಚೀನಾ ಸರ್ಕಾರ ನಿಷೇಧ ಹೇರಿದೆ.
Advertisement
ಇಸ್ಲಾಂ, ಖುರಾನ್, ಇಮಾಮ್, ಹಾಜಿ, ಸದ್ದಾಂ, ಮೆಕ್ಕಾ, ಮದೀನಾ, ಸೇರಿದಂತೆ ಕೆಲ ಹೆಸರುಗಳನ್ನು ನಿಷೇಧಿಸಲಾಗಿದೆ ಎಂದು ರೇಡಿಯೊ ಫ್ರೀ ಏಷ್ಯಾ(ಆರ್‍ಎಫ್‍ಎ) ವರದಿ ಮಾಡಿದೆ. ಇಸ್ಲಾಮಿಕ್ ಉಗ್ರವಾದವನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ ಎಂದು ತಿಳಿಸಿದೆ.
Advertisement
ಯಾವೆಲ್ಲ ಹೆಸರುಗಳನ್ನು ನಿಷೇಧಿಸಲಾಗಿದೆ ಎನ್ನುವ ಸಂಪೂರ್ಣ ವಿವರ ಪ್ರಕಟವಾಗಿಲ್ಲ. ಧಾರ್ಮಿಕತೆಯಿಂದ ಕೂಡಿದ ಹೆಸರನ್ನು ಇರಿಸಿದ್ದ ಶಿಶು ಮುಂದೆ ಆರೋಗ್ಯ, ಶಿಕ್ಷಣ ಇತ್ಯಾದಿ ಸರ್ಕಾರಿ ಯೋಜನೆಗಳಿಂದ ವಂಚಿತವಾಗಲಿದೆ ಆರ್‍ಎಫ್‍ಎ ವರದಿ ಮಾಡಿದೆ.
Advertisement
ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡದಂತೆ ಉಯ್ಘರ್ ಮುಸ್ಲಿಮರಿಗೆ ಸೂಚಿಸಲಾಗಿದೆ. ಬುರ್ಖಾ ತೊಟ್ಟು ಸಾರ್ವಜನಿಕ ಪ್ರದೇಶಗಳಲ್ಲಿ ಸಂಚಾರ, ಅಸಹಜವಾಗಿ ಗಡ್ಡ ಬಿಡುವುದನ್ನು ಏಪ್ರಿಲ್ 1 ರಂದು ಚೀನಾ ನಿಷೇಧಿಸಿತ್ತು.