ಬೆಂಗಳೂರು: ಚಿಲುಮೆ (Chilume) ಡೇಟಾ ಕಳವು ಪ್ರಕರಣ ಕೇಂದ್ರ ಚುನಾವಣಾ ಆಯೋಗ (Central Election Commission) ದ ಮೆಟ್ಟಿಲೇರಿದೆ. ಇಂದು ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡುತ್ತಿರುವ ಹಿನ್ನೆಲೆ ನಿನ್ನೆ ರಾತ್ರಿಯೇ ಬಿಜೆಪಿಯಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ಫ್ಯಾಕ್ಸ್ ಮೂಲಕ ದೂರು ಸಲ್ಲಿಕೆ ಆಗಿದೆ.
Advertisement
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಿಲುಮೆ ಸಂಸ್ಥೆಗೆ ಅನುಮತಿ ನೀಡಿರುವ ವಿಚಾರ ಉಲ್ಲೇಖಿಸಿ ಪರಿಷತ್ ಸದಸ್ಯ ಎನ್. ರವಿಕುಮಾರ್ 4 ಪುಟಗಳ ದೂರು ಸಲ್ಲಿಸಿದ್ದಾರೆ. ಮತಪಟ್ಟಿ ಡಿಲೀಟ್‍ಗೂ ರಾಜ್ಯ ಸರ್ಕಾರಕ್ಕೂ ಸಂಬಂಧ ಇಲ್ಲ. ಚಿಲುಮೆ ಸಂಸ್ಥೆಯ ನೇಮಕ ಮಾಡಿದ್ದೇ ಕಾಂಗ್ರೆಸ್. ಈ ಪ್ರಕರಣದಲ್ಲಿ ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ಮನವಿ ಮಾಡಲಾಗಿದೆ. ಇದನ್ನೂ ಓದಿ: ಬಿಜೆಪಿ ಕಣ್ಣು ಕೆಂಪಗಾಗಿಸಿದೆ ಕಾಂಗ್ರೆಸ್‍ನ ಟಿಕೆಟ್ ಆಕಾಂಕ್ಷಿಗಳ ಪಟ್ಟಿ – ಪ್ರಭಾವಿ ನಾಯಕರಿಗೆ ಗಾಳ ಹಾಕಲು ಪ್ಲಾನ್
Advertisement
Advertisement
ಸದ್ಯ ಚಿಲುಮೆ ಕೇಸ್ ನ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ರವಿಕುಮಾರ್ ಸಹ ಪೊಲೀಸ್ ಕಬ್ಜಾದಲ್ಲಿದ್ದಾನೆ. ಈ ಆರೋಪಿಗಳು ವಿಚಾರಣೆ ವೇಳೆ ಕೆಲ ಸುಳಿವು ಬಾಯಿ ಬಿಟ್ಟಿದ್ದಾರೆನ್ನಲಾಗಿದೆ. ಆರೋಪಿಗಳ ವಿಚಾರಣಾ ಹೇಳಿಕೆಯ ಮಾಹಿತಿಗಳೇ ಈಗ ಬಿಜೆಪಿ (BJP) ಗೆ ಅಸ್ತ್ರವಾಗಿದೆ. ಇದನ್ನೂ ಓದಿ: ವೋಟರ್ ಲಿಸ್ಟ್ ಹಗರಣ – ಮುಖ್ಯ ಆರೋಪಿ ರವಿಕುಮಾರ್ ಆಪ್ತ ಲೋಕೇಶ್ ಬಂಧನ
Advertisement
ಈ ಮಾಹಿತಿ ಆಧರಿಸಿ ಕಾಂಗ್ರೆಸ್ ಗೆ ಕೌಂಟರ್ ಕೊಡಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಚಿಲುಮೆಯಿಂದ ಸರ್ವೆ ಮಾಡಿಸಿಕೊಂಡ ಕೈ ಶಾಸಕರ ಹೆಸರು ಬಿಡುಗಡೆಗೆ ಬಿಜೆಪಿ ರೆಡಿ ಮಾಡಿಕೊಳ್ಳುತ್ತಿದೆ. ಪೊಲೀಸರ ಮೂಲಕವೇ ಕಾಂಗ್ರೆಸ್ ಶಾಸಕರ ಹೆಸರು ಬಯಲು ಸಾಧ್ಯತೆ ಇದೆ. ಈ ಮೂಲಕ ಕಾಂಗ್ರೆಸ್ ಪಡೆಗೆ ಮುಜುಗರ ತರಲು ಬಿಜೆಪಿ ಪ್ಲಾನ್ ಮಾಡಿದ್ದು, ಕಾಂಗ್ರೆಸ್ ದಾಳವನ್ನೇ ಪ್ರತಿದಾಳ ಮಾಡಿಕೊಂಡು ಟಕ್ಕರ್ ಕೊಡಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನಲಾಗಿದೆ.