ಜೆರುಸಲೇಂ: ಇಸ್ರೇಲಿ ಮಿಲಿಟರಿಯಿಂದ ಹತ್ಯೆಯಾದ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ದೇಹ ಯಾವ ಸ್ಥಿತಿಯಲ್ಲಿತ್ತು ಎಂಬ ವಿವರ ಹೊರಬಿದ್ದಿದೆ.
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ದಕ್ಷಿಣ ಗಾಜಾದಲ್ಲಿ ಗುಪ್ತಚರ ಆಧಾರಿತ ದಾಳಿಯಲ್ಲಿ ಹತ್ಯೆಯಾದ. ಸಿನ್ವಾರ್ ಪ್ಯಾಲೇಸ್ಟಿನಿಯನ್ ಗುಂಪಿನ ಹಮಾಸ್‌ನ ಪಾಲಿಟ್‌ಬ್ಯೂರೋ ಮುಖ್ಯಸ್ಥನಾಗಿದ್ದ. ಇಸ್ರೇಲ್ ಗ್ರೌಂಡ್ ಫೋರ್ಸಸ್ (IDF) ನ 828 ಬ್ರಿಗೇಡ್ ರಾಫಾದ ಟೆಲ್ ಅಲ್-ಸುಲ್ತಾನ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅಲ್ಲಿ ಸ್ಕ್ಯಾನ್ ಮಾಡುವಾಗ ಹಮಾಸ್ ಮುಖ್ಯಸ್ಥನ ದೇಹ ಪತ್ತೆಯಾಯಿತು. ಕಾರ್ಯಾಚರಣೆಯಲ್ಲಿ ಆತ ಹತ್ಯೆಯಾಗಿರುವುದನ್ನು ದೃಢಪಡಿಸಲಾಯಿತು. ಇದನ್ನೂ ಓದಿ: ಇಸ್ರೇಲ್‌ನಲ್ಲಿದ್ದ ವೈದ್ಯಕೀಯ ದಾಖಲೆಗಳಿಂದ ಹಮಾಸ್ ನಾಯಕ ಸಿನ್ವಾರ್ ಗುರುತು ಪತ್ತೆ!
Advertisement
Advertisement
ಇಸ್ರೇಲ್ ನ್ಯಾಷನಲ್ ಸೆಂಟರ್ ಆಫ್ ಫೊರೆನ್ಸಿಕ್ ಮೆಡಿಸಿನ್‌ನ ಮುಖ್ಯ ರೋಗಶಾಸ್ತ್ರಜ್ಞ ಚೆನ್ ಕುಗೆಲ್, ಸಿನ್ವಾರ್ ಇಲ್ಲಿ ಕೈದಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಹೊಂದಿದ್ದ ಪ್ರೊಫೈಲ್‌ನೊಂದಿಗೆ ಮೃತದೇಹವನ್ನು ಹೋಲಿಕೆ ಮಾಡಿದೆವು. ಡಿಎನ್‌ಎ ಮೂಲಕ ಸಿನ್ವಾರ್‌ನನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
ಇಸ್ರೇಲಿ ಸೈನಿಕರು ನಡೆಸಿದ ಕಾರ್ಯಾಚರಣೆಯಲ್ಲಿ, ಬುಲೆಟ್ ಸಿನ್ವಾರ್ ತಲೆಯನ್ನು ಹೊಕ್ಕಿದೆ. ಅಲ್ಲದೇ ಆತನ ಬೆರಳು ಸಹ ಕಟ್ ಆಗಿದೆ. ಭೀಕರ ಸ್ಥಿತಿಯಲ್ಲಿ ಸಿನ್ವಾರ್ ಹತ್ಯೆಯಾಗಿದ್ದಾನೆ. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವೀಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಹಮಾಸ್ ಈ ಕೆಲಸ ಮಾಡಿದ್ರೆ ನಾಳೆಯೇ ಯುದ್ಧ ಕೊನೆಗೊಳ್ಳುತ್ತದೆ – ಇಸ್ರೇಲ್ ಪ್ರಧಾನಿ ಎಚ್ಚರಿಕೆ
Advertisement
ದಾಳಿ ಆರಂಭದಲ್ಲಿ ಸಿನ್ವಾರ್ ಗಂಭೀರ ಗಾಯಗೊಂಡಿದ್ದ. ಆತನ ತಲೆಗೆ ಗುಂಡೇಟು ಬಿದ್ದಾಗ ಮೃತಪಟ್ಟಿದ್ದಾನೆ. ಸಿನ್ವಾರ್ ಮುಖಕ್ಕೆ ಗಂಭೀರ ಗಾಯಗಳಾಗಿರುವುದನ್ನು ವೀಡಿಯೋಗಳು ತೋರಿಸಿವೆ. ಭೀಕರ ದಾಳಿಗೆ ಆತನ ತಲೆಬುರುಡೆ ಭಾಗವು ಸೀಳಿಹೋಗಿದೆ.