ಹಾವೇರಿ: ದಿಢೀರ್ ಮೆಣಸಿನಕಾಯಿ ದರ ಕಡಿಮೆಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು (Farmers) ಮಾರುಕಟ್ಟೆ ಆಡಳಿತ ಕಚೇರಿಗೆ (Market Administration Office) ಕಲ್ಲುತೂರಿ, ವಾಹನಗಳಿಗೆ ಬೆಂಕಿ ಇಟ್ಟ ಘಟನೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ (Byadgi Chilli Market) ನಡೆದಿದೆ.
Advertisement
ಪ್ರತಿ ಕ್ವಿಂಟಾಲ್ ಮೆಣಸಿನಕಾಯಿಗೆ ಕಳೆದ ವಾರ 20 ಸಾವಿರ ರೂ. ದರ ನಿಗದಿಯಾಗಿತ್ತು. ಆದರೆ ಈ ವಾರ 12 ಸಾವಿರ ರೂ. ದರ ನಿಗದಿ ಮಾಡಿದ್ದಕ್ಕೆ ಆಕ್ರೋಶಗೊಂಡ ರೈತರು ಎಪಿಎಂಸಿ ಕಚೇರಿ ಮುಂದೆ ಇರುವ ಆಡಳಿತ ಕಚೇರಿಗೆ ಕಲ್ಲು ತೂರಿದ್ದಾರೆ. ಇದನ್ನೂ ಓದಿ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ – ಕೇಂದ್ರದಿಂದ ಅಧಿಸೂಚನೆ ಪ್ರಕಟ
Advertisement
ಕಚೇರಿಯ ಮುಂದೆ ನಿಂತಿದ್ದ ಸರ್ಕಾರಿ ಕಾರಿನ ಗಾಜು ಪುಡಿಪುಡಿಯಾಗಿದೆ. ಇನ್ನೊಂದು ಕಾರನ್ನು ಎತ್ತಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಪಿಎಂಸಿ ಆಡಳಿತ ಕಚೇರಿಯ ಮುಂಭಾಗದಲ್ಲಿ ಅಗ್ನಿಶಾಮಕ ದಳ ವಾಹನ, ಎಪಿಎಂಸಿ ಕಾರಿನ ಜೊತೆ ಖಾಸಗಿ ವ್ಯಕ್ತಿಗಳ ಎರಡು ಕಾರು, 10 ಬೈಕಿಗೆ ಬೆಂಕಿ ಹಚ್ಚಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
Advertisement