ಹಾವೇರಿ: ತುಂಗಭದ್ರಾ ನದಿ ತೀರದಲ್ಲಿ ಮರಳು ಸಾಗಾಣಿಕೆಗೆ ಮಕ್ಕಳನ್ನು ಪೋಷಕರು ಬಳಕೆ ಮಾಡಿಕೊಳ್ಳುತ್ತಿರೋ ಶಾಕಿಂಗ್ ವಿಚಾರ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಬಳಿ ನಡೆಯುತ್ತಿದೆ.
Advertisement
ರಾಣೆಬೆನ್ನೂರಿನ ಚಿಕ್ಕಕುರುವತ್ತಿ ಗ್ರಾಮದ ಬಳಿ ಮರಳಿನ ಗಾಡಿ ಓಡಿಸ್ತಿದ್ದ ಬಾಲಕನ ವೀಡಿಯೋ ಈಗ ವೈರಲ್ ಆಗಿದೆ. ಗ್ರಾಮದ ಬಳಿ ಇರೋ ತುಂಗಭದ್ರಾ ನದಿಯಿಂದ ಎತ್ತಿನ ಗಾಡಿಯಲ್ಲಿ ಮರಳು ತುಂಬಿಕೊಂಡು ಪೋಷಕರ ಜೊತೆಗೆ ಬಾಲಕ ಎತ್ತಿನಬಂಡಿಯನ್ನು ಓಡಿಸುತ್ತಿದ್ದನು. ಇದನ್ನೂ ಓದಿ: ಪ್ರತಿಭಟನೆ ನಡೆದರೂ ಚಿಕ್ಕಬಳ್ಳಾಪುರದಲ್ಲಿ KSRTC ಬಸ್ಸುಗಳಿಗೆ ಇಲ್ಲ ಬಂದ್
Advertisement
Advertisement
ಈ ವೇಳೆ ಸ್ಥಳೀಯರು ಇದನ್ನು ಗಮನಿಸಿ ಮರಳಿನ ಗಾಡಿ ತಡೆದು ನಿಲ್ಲಿಸಿ, ಬಾಲಕನನ್ನು ಶಾಲೆಗೆ ಕಳಿಸೋ ಬದಲು ಮರಳು ತುಂಬಿಕೊಂಡು ಬರಲು ಕಳುಸಿದ್ದಕ್ಕೆ ಪೋಷಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೀವು ಹಾಳು ಆಗಿದ್ದೀರಿ ಮಕ್ಕಳನ್ನು ಹಾಳು ಮಾಡಬೇಡಿ. ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ಸ್ಥಳೀಯನ ಆಕ್ರೋಶಕ್ಕೆ ಕಂಗಾಲಾಗಿ ಬಾಲಕನ ಪೋಷಕ ಇಲ್ಲದ ಸಬೂಬು ನೀಡಿದ್ದಾನೆ. ವಿಷಯ ಗೊತ್ತಿದ್ದರೂ ಪೊಲೀಸರು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ನೇಮಕಾತಿ ಪರೀಕ್ಷೆ ವೇಳೆ ವಂಚನೆ – ಐವರು ಅರೆಸ್ಟ್