ಚಾಮರಾಜನಗರ: ಅರಣ್ಯದಿಂದ ನೀರು ಹಾಗೂ ಮೇವು ಅರಸಿ ನಾಡಿನತ್ತ ಬಂದಿದ್ದ ಜಿಂಕೆಯೊಂದರ ಮೇಲೆ ನಾಯಿಗಳು ದಾಳಿ ನಡೆಸಿದ್ದವು. ಈ ವೇಳೆ ಜಿಂಕೆಯನ್ನು ಜಿಲ್ಲೆ ಹನೂರು ತಾಲೊಕಿನ ಶಾಗ್ಯ ಸಮೀಪದ ಬಿರೂಟ್ ಗ್ರಾಮದ ಮಕ್ಕಳು ರಕ್ಷಿಸಿ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
Advertisement
ಬೇಸಿಗೆ ಕಾಲ ಆಗಿರುವುದರಿಂದ ಕಾಡಿನಲ್ಲಿರುವ ಪ್ರಾಣಿಗಳು ಸರಿಯಾಗಿ ಆಹಾರ, ನೀರು ಸಿಗದೇ ನಾಡಿನತ್ತ ಮುಖ ಮಾಡುತ್ತಿವೆ. ಹೀಗೆ ಹೊಟ್ಟೆಗೆ ಮೇವಿಲ್ಲದೆ ಆಹಾರ ಅರಸಿ ಬಿರೂಟ್ ಗ್ರಾಮದ ಬಳಿ ಜಿಂಕೆಯೊಂದು ಬಂದಿತ್ತು. ಗ್ರಾಮದಲ್ಲಿ ಕಾಣಿಸಿಕೊಂಡ ಜಿಂಕೆಯನ್ನು ನೋಡಿ ನಾಯಿಗಳು ಅದರ ಮೇಲೆ ದಾಳಿ ನಡೆಸಿವೆ. ಈ ವೇಳೆ ದಾಳಿಗೊಳಗಾಗಿದ್ದ ಜಿಂಕೆಯನ್ನು ಗ್ರಾಮದ ಮಕ್ಕಳು ರಕ್ಷಿಸಿ, ಗಾಯಗೊಂಡಿದ್ದ ಜಿಂಕೆಗೆ ಔಷಧಿಯನ್ನು ಹಚ್ಚಿ ಜೀವ ಉಳಿಸಿದ್ದಾರೆ.
Advertisement
Advertisement
ಸರಿಯಾದ ಸಮಯಕ್ಕೆ ನಾಯಿಗಳಿಂದ ಜಿಂಕೆಯನ್ನು ಮಕ್ಕಳು ರಕ್ಷಣೆ ಮಾಡಿದಕ್ಕೆ ಒಂದು ಜೀವ ಬದುಕುಳಿದಿದೆ. ಅಲ್ಲದೆ ಜಿಂಕೆಯನ್ನು ರಕ್ಷಿಸಿ, ಆರೈಕೆ ಮಾಡಿದ ಬಿರೂಟ್ ಗ್ರಾಮದ ಮಕ್ಕಳ ಕೆಲಸ ಎಲ್ಲರ ಮನ ಗೆದ್ದಿದ್ದು, ಮಕ್ಕಳಿಗೆ ಗ್ರಾಮಸ್ಥರು ಜಿಂಕೆಯನ್ನು ಆರೈಕೆ ಮಾಡುವುದಕ್ಕೆ ಸಾಥ್ ನೀಡಿದ್ದಾರೆ.
Advertisement
https://www.youtube.com/watch?v=HhiGm81xR04