ಚಿಕ್ಕಬಳ್ಳಾಪುರ: ರಸ್ತೆ ಬದಿಯಲ್ಲಿ ಸಿಕ್ಕ ಡ್ರೈನೇಜ್ ಪೈಪ್ ಕ್ಲೀನರ್ (Drinage Pipe Cleaner) ಪ್ಯಾಕೆಟ್‌ನಲ್ಲಿದ್ದ ಪೌಡರ್ ಅನ್ನು ಸಕ್ಕರೆ ಎಂದು ತಿಂದ ಮೂವರು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ (Devanahalli) ಪಟ್ಟಣದಲ್ಲಿ ನಡೆದಿದೆ.
ದೇವನಹಳ್ಳಿಯ ವಿನಾಯಕನಗರದ ಸುಚಿತ್ರಾ (3), ಲೋಹಿತ್ಯಾ (4) ಹಾಗೂ ವೇದಾಂತ್ (2) ಅಸ್ವಸ್ಥರಾಗಿರುವ ಮಕ್ಕಳು. ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗಿದ್ದರು. ಮನೆ ಬಳಿ ಆಟವಾಡುತ್ತಿದ್ದ ಮಕ್ಕಳಿಗೆ ರಸ್ತೆ ಬದಿಯಲ್ಲಿ ಡ್ರೈನೇಜ್ ಕ್ಲೀನರ್ ಪ್ಯಾಕೆಟ್ ಸಿಕ್ಕಿದೆ. ಈ ವೇಳೆ ಸಕ್ಕರೆ ಎಂದುಕೊಂಡು ಮೂವರು ಮಕ್ಕಳು ಡ್ರೈನೇಜ್ ಪೈಪ್ ಕ್ಲೀನ್ ಮಾಡುವ ಪೌಡರ್ ಸೇವಿಸಿದ್ದಾರೆ. ಇದನ್ನೂ ಓದಿ: ಅತಿಥಿ ಶಿಕ್ಷಕಿ, ವಿದ್ಯಾರ್ಥಿನಿಯರಿಗೆ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕನಿಂದ ಲೈಂಗಿಕ ಕಿರುಕುಳ
ಇದರಿಂದ ವಾಂತಿ ಮಾಡಿಕೊಂಡು ನರಳಾಡುತ್ತಿದ್ದ ಮಕ್ಕಳನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಸದ್ಯ ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಯುವಕನ ಮರ್ಡರ್ – ಮಹಾರಾಷ್ಟ್ರ ಮೂಲದ ಇಬ್ಬರು ಆರೋಪಿಗಳ ಬಂಧನ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]