ನವದೆಹಲಿ: ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೂ ನೀಡಬಹುದು ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ತಜ್ಞರು ಶಿಫಾರಸು ಮಾಡಿದ ಬಳಿಕವೂ ಅನುಮತಿ ನೀಡಲು ಭಾರತಿಯ ಔಷಧ ನಿಯಂತ್ರಣ ಪ್ರಾಧಿಕಾರ(ಡಿಸಿಜಿಐ) ಹಿಂದೇಟು ಹಾಕಿದೆ.
Advertisement
ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಈ ನಡೆ ಮಕ್ಕಳ ಲಸಿಕೆ ವಿಚಾರದಲ್ಲಿ ಆರಂಭಿಕ ಹಿನ್ನಡೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಡಿಸಿಜಿಐ ಅನುಮತಿ ವಿಳಂಬ ಮಾಡುತ್ತಿರುವ ಹಿನ್ನಲೆ ಮಕ್ಕಳಿಗೆ ಲಸಿಕೆ ನೀಡುವ ಸಮಯ ಮತ್ತಷ್ಟು ವಿಳಂಬವಾಗಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಚೀನಾ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಿದ ಭಾರತ – ಶಕ್ತಿಶಾಲಿ ಹೆರಾನ್ ಡ್ರೋನ್ ನಿಯೋಜನೆ
Advertisement
Advertisement
ಸಾಧಾರಣವಾಗಿ ಸಿಡಿಎಸ್‍ಸಿಒ ತಜ್ಞರು ಶಿಫಾರಸು ಮಾಡಿದ ಎರಡು, ಮೂರು ದಿನಗಳಲ್ಲಿ ವ್ಯಾಕ್ಸಿನ್ ಬಳಕೆಗೆ ಡಿಸಿಜಿಐ ಅನುಮತಿ ನೀಡುತ್ತಿತ್ತು. ಆದರೆ ಈ ಬಾರಿ ಮಕ್ಕಳ ವ್ಯಾಕ್ಸಿನ್ ವಿಚಾರದಲ್ಲಿ ಗಂಭೀರವಾಗಿರುವ ಡಿಸಿಜಿಐ ವಾರ ಕಳೆದರೂ ಅನುಮತಿ ನೀಡಲು ಇನ್ನೂ ತೀರ್ಮಾನಿಸಿಲ್ಲ. ಇದನ್ನೂ ಓದಿ: ಶಾಸಕ ಗೌರಿಶಂಕರ್‌ಗೆ ಮುಳುವಾಗುತ್ತಾ ವಿದ್ಯಾರ್ಥಿಗಳಿಗೆ ನಕಲಿ ವಿಮಾ ಬಾಂಡ್ ಹಂಚಿಕೆ ಕೇಸ್?
Advertisement
ಮೂಲಗಳ ಪ್ರಕಾರ ಮಕ್ಕಳ ವ್ಯಾಕ್ಸಿನ್ ವಿಚಾರದಲ್ಲಿ ತಜ್ಞರ ಶಿಫಾರಸು ಬಳಿಕವೂ ಡಿಸಿಜಿಐ ಹೆಚ್ಚುವರಿ ತಾಂತ್ರಿಕ ವರದಿ ಪಡೆಯುತ್ತಿದೆ ಎಂದು ವರದಿಯಾಗಿದೆ. ಮೊದಲ ಬಾರಿಗೆ 2-18 ವರ್ಷದೊಳಗಿನ ಮಕ್ಕಳಿಗೆ ಭಾರತೀಯ ವ್ಯಾಕ್ಸಿನ್ ನೀಡಲು ಅನುಮತಿ ನೀಡಲಾಗುತ್ತಿದೆ. ಈ ಹಿನ್ನಲೆ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಲು ಮತ್ತಷ್ಟು ಮಾಹಿತಿ ಸಂಗ್ರಹ ಮಾಡಲು ತೀರ್ಮಾನಿಸಿದ್ದು, ಪೂರ್ಣ ವರದಿಯ ಬಳಿಕ ಡಿಸಿಜಿಐನಿಂದ ಅನುಮತಿ ನೀಡುವ ಸಾಧ್ಯತೆ ಇದೆ.