ಕೂಲ್ ಡ್ರಿಂಕ್ಸ್‌ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ಕುಡಿಸಿ ತಾನು ಕುಡಿದು ತಾಯಿ ಆತ್ಮಹತ್ಯೆ

Public TV
1 Min Read
BLY SUICIDE

ಬಳ್ಳಾರಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದು, ತಾಯಿ ಮತ್ತು ಒಂದು ಮಗು ಸಾವನ್ನಪ್ಪಿದೆ. ಮತ್ತೊಂದು ಮಗು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ಘಟನೆ ಜಿಲ್ಲೆಯ ಕೊರುಗೋಡು ತಾಲೂಕಿನ ಹಳೇ ನಲ್ಗುಡಿ ಗ್ರಾಮದಲ್ಲಿ ನಡೆದಿದೆ.

ಶಾಂತಮ್ಮ (28) ಮತ್ತು ವರಲಕ್ಷ್ಮಿ (6) ಮೃತ ತಾಯಿ-ಮಗಳು. ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದ ಶಾಂತಮ್ಮಳನ್ನು ಕುರುಗೋಡು ತಾಲೂಕಿನ ಹಳೇನೆಲ್ಲುಡಿ ಗ್ರಾಮದ ಮಾರೆಪ್ಪನಿಗೆ ಕೊಟ್ಟು ಕಳೆದ 9 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದಗಿನಿಂದಲೂ ಪತಿ, ಅತ್ತೆ ಮತ್ತು ಮಾವ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ.

vlcsnap 2019 08 01 15h37m18s87
ಪ್ರತಿ ದಿನದಂತೆ ಬುಧವಾರವೂ ಕೂಡ ಕ್ಷುಲ್ಲಕ ವಿಚಾರಕ್ಕೆ ಮನೆಯಲ್ಲಿ ಜಗಳವಾಗಿದೆ. ಆದರೆ ಇದರಿಂದ ತೀವ್ರ ಮನನೊಂದ ನನ್ನ ಮಗಳು ತನ್ನೆರಡು ಮಕ್ಕಳಾದ ವರಲಕ್ಷ್ಮಿ ಮತ್ತು ನೇತ್ರಾವತಿಗೆ ಕೂಲ್ ಡ್ರಿಂಕ್ಸ್ ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ಕುಡಿಸಿ ತಾನೂ ಅದನ್ನು ಕುಡಿದಿದ್ದಾಳೆ ಎಂದು ಮೃತ ತಾಯಿ ಅಂಕಮ್ಮ ತಿಳಿಸಿದ್ದಾರೆ.

ಪತಿ ಮತ್ತು ಅತ್ತೆ ಸೇರಿದಂತೆ ಮನೆಯವರೆಲ್ಲ ಹೊಲಕ್ಕೆ ಹೋದಾಗ ಈ ಘಟನೆ ನಡೆದಿದ್ದರಿಂದ ಯಾರು ಕೂಡ ಗಮನಿಸಿರಲಿಲ್ಲ. ಸಂಜೆ ವಾಪಸ್ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಅಷ್ಟರಲ್ಲಾಗಲೇ ತಾಯಿ ಶಾಂತಮ್ಮ ಮತ್ತು ವರಲಕ್ಷ್ಮಿ ಸಾವನ್ನಪ್ಪಿದ್ದರು. 4 ವರ್ಷದ ಮಗಳು ನೇತ್ರಾವತಿ ಸಾವು ಬದುಕಿನ ಮಧ್ಯೆ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾಳೆ. ಮೃತ ಶಾಂತಮ್ಮಳ ತಾಯಿ ಅಂಕಮ್ಮ ಪತಿ ಮನೆಯ ಕಿರುಕುಳದಿಂದಲೇ ತನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ಕುರುಗೋಡು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಎಸ್.ಪಿ ಸಿ.ಕೆ. ಬಾಬಾ ಹೇಳಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತಿ ಮಾರೆಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *