Connect with us

Bengaluru City

ಬೆಂಕಿ ಹಚ್ಚಿ ಮಕ್ಕಳಿಬ್ಬರನ್ನು ಕೊಂದು, ತಾನು ಸತ್ತ

Published

on

-ಚಿಂತಾಜನಕ ಸ್ಥಿತಿಯಲ್ಲಿ ಪತ್ನಿ

ಬೆಂಗಳೂರು: ತಾನು ಬೆಳೆಸಿದ್ದ ಮುದ್ದು ಮಕ್ಕಳನ್ನು ಬೆಂಕಿ ಹಚ್ಚಿ ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಿಲಿಕಾನ್ ಸಿಟಿಯ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಭಕ್ಷಿಗಾರ್ಡನ್‍ನಲ್ಲಿ ಘಟನೆ ನಡೆದಿದೆ. ಮಕ್ಕಳಾದ ಕಾವೇರಿ (21) ಮತ್ತು ಶ್ರೀಕಾಂತ್ (13) ಸಾವನ್ನಪ್ಪಿದ ದುರ್ದೈವಿಗಳು. ಕಾರ್ಪೇರೆಂಟರ್ ಆಗಿ ಕೆಲಸ ಮಾಡಿಕೊಂಡಿದ್ದ ಮುರಳಿ, ಇಂದು ಬೆಳಗ್ಗೆ ಹಾಲು ತೆರಲು ಹೋಗಿದ್ದನು. ಹಾಲಿನ ಜೊತೆ ಡೀಸೆಲ್ ತಂದ ಮುರಳಿ ಮಲಗಿದ್ದ ಪತ್ನಿ ಗೀತಾ, ಪುತ್ರಿ ಕಾವೇರಿ ಮತ್ತು ಪುತ್ರ ಶ್ರೀಕಾಂತ್ ನಿಗೆ ಬೆಂಕಿ ಹಚ್ಚಿದ್ದಾನೆ. ಕೊನೆಗೆ ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ.

ಬೆಂಕಿಗೆ ಸಿಲುಕಿದ ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ರೆ, ತಂದೆ ಮುರಳಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಪತ್ನಿ ಗೀತಾ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ದಂಪತಿಯ ಇನ್ನೋರ್ವ ಬೇರೆ ಮನೆಯಲ್ಲಿ ಮಲಗಿದ್ದರಿಂದ ಆತ ಬದುಕುಳಿದಿದ್ದಾನೆ. ಮುರಳಿ ಕೆಲ ದಿನಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇರುತ್ತಿದ್ದನು. ಗೀತಾ ಹೂ ಕಟ್ಟುವ ಮೂಲಕ ಮನೆಯನ್ನು ನಡೆಸುತ್ತಿದ್ದರು.

ಕೆಲಸಕ್ಕೆ ಹೋಗದೇ ಬೀದಿ ತಿರುಗುತ್ತಿದ್ದ ಪತಿಯ ಮೇಲೆ ಸಹಜವಾಗಿಯೇ ಪತ್ನಿಗೆ ಬೇಸರವಿತ್ತು. ಈ ಬಗ್ಗೆ ಹಲವು ಬಾರಿ ಜಗಳ ಮಾಡಿಕೊಂಡಿದ್ದರು. ಮಗಳು ಕಾವೇರಿ ಬಿಕಾಂ, ಶ್ರೀಕಾಂತ್ 9ನೇ ತರಗತಿ ಓದುತ್ತಿದ್ದುದ್ದರಿಂದ ಹಣದ ಅವಶ್ಯಕತೆಯೂ ಇತ್ತು. ಭಾನುವಾರ ತಡರಾತ್ರಿಯವರೆಗೂ ಕೂಡ ಜಗಳ ನಡೆದಿತ್ತು ಎಂದು ಅಕ್ಕ ಪಕ್ಕದ ನಿವಾಸಿಗಳ ಹೇಳುತ್ತಾರೆ. ಪ್ರತಿದಿನದ ಜಗಳ ಎಂದುಕೊಂಡು ಸ್ಥಳೀಯ ನಿವಾಸಿಗಳು ಸುಮ್ಮನಾಗಿದ್ದರು.

ಇಂದು ಹಾಲು ತರುವ ನೆಪದಲ್ಲಿ ಹೊರ ಬಂದ ಮುರಳಿ ಹಾಲಿನ ಜೊತೆ ಡೀಸೆಲ್ ತಂದಿಟ್ಟಿದ್ದನು. ಡೀಸೆಲ್ ಮನೆಗೆ ತಂದು ಹೆಂಡತಿ ಮಕ್ಕಳ ಮೇಲೆ ಸುರಿದು ಬೆಂಕಿ ಹಚ್ಚಿದ್ದನು. ಯಾವಾಗ ಸಾವು ರಣ ಕೇಕೆ ಹಾಕುತ್ತಿದ್ದಂತೆ ಹೆದರಿ ತಾನು ಡೀಸೆಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇನ್ನು ಮತ್ತೊಬ್ಬ ಮಗ ಬೇರೆ ಮನೆಯಲ್ಲಿ ಮಲಗಿದ್ದರಿಂದ ಆತ ಬಚಾವಾಗಿದ್ದಾನೆ. ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣವೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.

Click to comment

Leave a Reply

Your email address will not be published. Required fields are marked *