ತಿರುವನಂತಪುರಂ: ಊಟ ಮಾಡಲು ನಿರಾಕರಿಸಿದ್ದಕ್ಕಾಗಿ ನಾಲ್ಕು ವರ್ಷದ ಮಗಳನ್ನು ತಾಯಿಯೇ ಸಾವನ್ನಪ್ಪುವಂತೆ ಥಳಿಸಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.
ದಿಯಾ ಸಾವನ್ನಪಿದ ಬಾಲಕಿಯಾಗಿದ್ದು, ದೀಪಕ್ ಹಾಗೂ ರಮ್ಯಾ ದಂಪತಿಯ ಮಗಳಾಗಿದ್ದಾಳೆ. ದಿಯಾಳ ದೇಹದಲ್ಲಿ ಹಲ್ಲೆ ಮಾಡಿದ ಗಾಯದ ಗುರುತುಗಳಿದ್ದು, ಬಾಲಕಿ ಅನಾರೋಗ್ಯದಿಂದ ಬಳಲುತ್ತಿದ್ದಳು ಎಂದು ವೈದ್ಯರು ದೃಢಪಡಿಸಿದ್ದಾರೆ.
Advertisement
ಈ ಕುರಿತು ಪೊಲೀಸರು ದಿಯಾಳ ತಾಯಿಯನ್ನು ವಿಚಾರಣೆ ನಡೆಸುತ್ತಿದ್ದು, ರಮ್ಯಾ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚೆಂಗನ್ನುರ್ ಮೂಲದವರಾಗಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Advertisement
ಭಾನುವಾರ ಬೆಳಗ್ಗೆ ಊಟ ಮಾಡುವುದನ್ನು ನಿರಾಕರಿಸಿದ್ದಕ್ಕೆ ಕೋಲಿನಿಂದ ಹೊಡೆದೆ ಎಂದು ರಮ್ಯಾ ತಿಳಿಸಿದ್ದಾರೆ. ಆದರೆ ಬಾಲಕಿ ದೇಹದ ಮೇಲಿರುವ ಹಲ್ಲೆ ಮಾಡಿರುವ ಗುರುತುಗಳು ಎರಡು ದಿನದ ಹಿಂದಿನದಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement
ದಿಯಾ ಊಟ ಮಾಡದ್ದಕ್ಕೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವಳಿಗೆ ಅನಾರೋಗ್ಯ ಸಹ ಉಂಟಾಗಿತ್ತು. ದೇಹದ ಮೇಲಿನ ಗಾಯಗಳನ್ನು ನೋಡಿ ವೈದ್ಯರು ಮಗುವಿಗೆ ಹೊಡೆದಿರಾ ಎಂದು ಪ್ರಶ್ನಿಸಿದರು. ಆಗ ರಮ್ಯಾ ಹೌದು ಕೋಲಿನಿಂದ ಹೊಡೆದೆ ಎಂದು ಉತ್ತರಿಸಿದಳು ಎಂದು ದಿಯಾ ಚಿಕ್ಕಮ್ಮ ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ ಮಗುವನ್ನು ಪರಿಪ್ಪಳ್ಳಿ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲೇ ಬಾಲಕಿ ರಕ್ತ ವಾಂತಿ ಮಾಡಿಕೊಂಡಿದ್ದಾಳೆ. ಮಗುವಿನ ಸ್ಥಿತಿ ಗಂಭಿರವಾಗಿದ್ದರಿಂದ ತಿರುವನಂತಪುರಂನ ಆಸ್ಪತ್ರಗೆ ಕರೆದೊಯ್ಯವಂತೆ ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗಲೇ ಬಾಲಕಿಯ ಹೃದಯ ಬಡಿತ ನಿಂತಿದೆ. ಆಗ ದಾರಿ ಮಧ್ಯೆ ಇಎಸ್‍ಐ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲೇ ಬಾಲಕಿ ಸಾವನ್ನಪ್ಪಿದ್ದಾಳೆ.
ಮಗುವಿನ ಕುಟುಂಬವು ಕೊಲ್ಲಂನ ಚಥನ್ನೂರ್‍ನಲ್ಲಿ ಒಂದು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಿದೆ. ದಂಪತಿಗೆ 2 ವರ್ಷದ ಇನ್ನೊಬ್ಬ ಮಗಳಿದ್ದಾಳೆ. ದಿಯಾ ಮೊದಲು ದಾಖಲಾಗಿದ್ದ ಆಸ್ಪತ್ರೆಯ ಆಡಳಿತ ಮಂಡಳಿ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಝಕೂಟ್ಟಂನ ಸಿಎಸ್‍ಐ ಆಸ್ಪತ್ರೆಯಲ್ಲಿ ಮಗುವಿನ ದೇಹವನ್ನು ಇಡಲಾಗಿದೆ. ಮಗುವಿನ ತಂದೆಯನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.