ಗಾಂಧೀನಗರ: ಸೂರತ್‍ನಲ್ಲಿ (Surat) ನಡೆದ ಎಎಪಿ ಚುನಾವಣಾ ಸಭೆಯ ವೇಳೆ ಜರುಗಿದ ಕಲ್ಲು ತೂರಾಟ ಘರ್ಷಣೆಗೆ ಬಿಜೆಪಿಯೇ ಕಾರಣ. ಇದರಿಂದಾಗಿ ಬಾಲಕನೋರ್ವ ಗಾಯಗೊಂಡಿದ್ದಾನೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) (Gujarat unit of Aam Aadmi Party (AAP) ) ಗುಜರಾತ್ (Gujarat) ಘಟಕದ ಮುಖ್ಯಸ್ಥ ಗೋಪಾಲ್ ಇಟಾಲಿಯಾ (Gopal Italia) ಆರೋಪಿಸಿದ್ದಾರೆ.
ಈ ಘಟನೆ ಸಂಬಂಧ ಇಟಾಲಿಯಾ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಕತರಗಾಂ ವಿಧಾನಸಭಾ ಚುನಾವಣೆಯಲ್ಲಿ (Katargam Assembly Elections) ಸೋಲುವ ಭಯದಿಂದಾಗಿ, ಬಿಜೆಪಿ ಗೂಂಡಾಗಳು ಇಂದು ನಾನು ಸಾರ್ವಜನಿಕ ಸಭೆ ನಡೆಸುತ್ತಿದ್ದ ವೇಳೆ ನನ್ನ ಮೇಲೆ ಕಲ್ಲು ತೂರಾಟ ನಡೆಸಿದರು. ಆದರೆ ಈ ಘಟನೆಯಲ್ಲಿ ಪುಟ್ಟ ಬಾಲಕ ಗಾಯಗೊಂಡಿದ್ದಾನೆ. ಇದನ್ನೂ ಓದಿ: ಮೈಸೂರಿನ ವಿವಾದಿತ ಗುಂಬಜ್ ಬಸ್ ನಿಲ್ದಾಣ – ಮೂರರಲ್ಲಿ 2 ಗೋಪುರ ತೆರವು
Advertisement
कतारगाम विधानसभा चुनाव हारने के डर से बौखला गए भाजपाई गुंडों ने आज मेरी जनसभा पर पथ्थरबाजी करी जिसमे एक छोटे बच्चा पथ्थर लगने से घायल हुआ है।
27 साल मे कुछ काम कर लिया होता तो आज आम आदमी पार्टी की जनसभा मे पथ्थर फेंकने नही पड़ते।
भाजपाई पथ्थरबाजो को जनता झाड़ू से जवाब देगी। pic.twitter.com/2hCCA0TKYV
— Gopal Italia (@Gopal_Italia) November 26, 2022
Advertisement
ರಾಜ್ಯದಲ್ಲಿ 27 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಒಂದಿಷ್ಟು ಕೆಲಸವನ್ನಾದರೂ ಮಾಡಿದ್ದರೆ, ಎಎಪಿ ಸಭೆಗೆ ಕಲ್ಲು ತೂರಾಟ ನಡೆಸಬೇಕಾದ ಅಗತ್ಯವಿರುತ್ತಿರಲಿಲ್ಲ ಎಂದಿದ್ದಾರೆ. ಅಲ್ಲದೇ ಎಎಪಿ ಚೆಹ್ನೆಯನ್ನು ಉಲ್ಲೇಖಿಸಿ, ಬಿಜೆಪಿಯ ಕಲ್ಲು ತೂರಾಟಗಾರರಿಗೆ ಸಾರ್ವಜನಿಕರು ಪೊರಕೆಯಿಂದ ಉತ್ತರಿಸುತ್ತಾರೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಹಿಂದಿ ಹೇರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ತಮಿಳುನಾಡು ರೈತ ಸಾವು
Advertisement
Advertisement
ಸುಮಾರು ಮೂರು ದಶಕಗಳಿಂದ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿರುವ ಗುಜರಾತ್‍ನಲ್ಲಿ ಈ ಬಾರಿ ಚುನಾವಣೆಯಲ್ಲಿ ಸಿಂಹಪಾಲು ಮತಗಳನ್ನು ಪಡೆಯಲು ಬಿಜೆಪಿ ಹಾಗೂ ಎಎಪಿ ಪೈಪೋಟಿ ನಡೆಸುತ್ತಿದೆ. ಡಿಸೆಂಬರ್ 1 ಮತ್ತು 5 ರಂದು ಗುಜರಾತ್‍ನಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.