– ಉಸಿರುಗಟ್ಟಿ ಪ್ರಜ್ಞೆ ತಪ್ಪಿದ ಬಾಲಕನ ರಕ್ಷಣೆ
ಕೋಲ್ಕತ್ತಾ: ಮಗನನ್ನು ಕಾರಿನಲ್ಲಿ ಲಾಕ್ ಮಾಡಿ ತಂದೆ-ತಾಯಿ ಸಮುದ್ರಕ್ಕೆ ಹೋಗಿ ಎಂಜಾಯ್ ಮಾಡಿದ್ದು, ಇದೇ ವೇಳೆ ಉಸಿರುಗಟ್ಟಿ ಪ್ರಜ್ಞೆ ತಪ್ಪಿದ ಬಾಲಕನನ್ನು ರಕ್ಷಣೆ ಮಾಡಿದ ಘಟನೆ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪೋರ್ ಜಿಲ್ಲೆಯಲ್ಲಿ ನಡೆದಿದೆ.
ತಂದೆ- ತಾಯಿ ತಮ್ಮ ಮಗನ ಜೊತೆ ರಜೆ ದಿನವನ್ನು ಕಳೆಯಲು ಪೂರ್ವ ಮಿಡ್ನಾಪೋರ್‍ದಲ್ಲಿದ್ದ ದಿಘಾ ಸಮುದ್ರಕ್ಕೆ ತೆರಳಿದ್ದರು. ಈ ವೇಳೆ ತಮ್ಮ ಮಗನನ್ನು ಕಾರಿನಲ್ಲಿಯೇ ಲಾಕ್ ಮಾಡಿ ಇಬ್ಬರು ಸಮುದ್ರದಲ್ಲಿ ಕಾಲ ಕಳೆಯಲು ಹೋಗಿದ್ದರು. ಇದೇ ವೇಳೆ ಬಾಲಕ ಇದ್ದ ಕಾರಿನ ಬಳಿ ಹೋಗುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಆತನನ್ನು ನೋಡಿದ್ದಾರೆ. ಕಿಟಕಿಗಳು ಮುಚ್ಚಿದ್ದ ಕಾರಣ ಬಾಲಕನಿಗೆ ಉಸಿರಾಡಲು ತೊಂದರೆ ಆಗುತಿತ್ತು. ಅಲ್ಲದೆ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದನು.
Advertisement
ಬಾಲಕನನ್ನು ನೋಡಿದ ಪೊಲೀಸ್ ಅಧಿಕಾರಿ ತಕ್ಷಣ ಬೇರೆ ಅಧಿಕಾರಿಗಳನ್ನು ಕರೆದು ಕಾರಿನ ಕಿಟಕಿಯನ್ನು ಒಡೆದು ಬಾಲಕನನ್ನು ರಕ್ಷಿಸಿದ್ದಾರೆ. ಬಳಿಕ ಪ್ರಜ್ಞೆ ತಪ್ಪಿದ್ದ ಬಾಲಕನ ಮೇಲೆ ನೀರು ಚಿಮುಕಿಸಿ ಆತನನ್ನು ಎಚ್ಚರಗೊಳಿಸಿದ್ದಾರೆ. ಸಮುದ್ರದಿಂದ ಸ್ಥಳಕ್ಕೆ ಬಂದ ಪೋಷಕರು ಮಗುವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯರು ಬಾಲಕನ ತಂದೆಗೆ ಹಿಗ್ಗಾಮುಗ್ಗಾ ಬಾರಿಸಿದ್ದಾರೆ. ಅಲ್ಲದೆ ಮಗನನ್ನು ಇಂತಹ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದಕ್ಕೆ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ಪೋಷಕರು ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೆ ಈ ರೀತಿ ಮತ್ತೆ ಮಾಡುವುದಿಲ್ಲ ಎಂದು ಬಾಲಕನ ತಂದೆ ಸ್ಥಳೀಯರ ಬಳಿ ಹೇಳಿಕೊಂಡಿದ್ದಾರೆ.