ಚಿಕ್ಕೋಡಿ: ಎಂಬಿಎ ಓದಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದ ಯುವಕನಿಗೆ ಶ್ರೇಷ್ಠ ಪಶು ಪಾಲಕ ಪ್ರಶಸ್ತಿ ನೀಡಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಬಿಟ್ಟು, ಪಶು ಸಾಕಾಣಿಯಲ್ಲಿ ಬೆಳಗಾವಿಯ ಯುವಕ ಈ ಸಾಧನೆ ಮಾಡಿದ್ದಾನೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕಲ್ಲೋಳಿ ಗ್ರಾಮದ ಮಾರುತಿ ಮರಡಿಗೆ ಬೀದರ್ ನಲ್ಲಿ ನಡೆದ ರಾಜ್ಯ ಮಟ್ಟದ ಪಶು ಮೇಳದಲ್ಲಿ ಶ್ರೇಷ್ಠ ಪಶು ಪಾಲಕ ಪ್ರಶಸ್ತಿ ನೀಡಲಾಗಿದೆ. ಮಾರುತಿ ಸಾಧನೆ ಗುರುತಿಸಿ ಶ್ರೇಷ್ಠ ಪಶು ಪಾಲಕ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ನೀಡಿ ಸತ್ಕರಿಸಿದ್ದಾರೆ.
- Advertisement
ಮಾರುತಿ ಎಂಬಿಎ ಪದವಿ ಮುಗಿಸಿ ನೌಕರಿ ಮಾಡಿ ಕೃಷಿಯಲ್ಲಿ ಏನ್ನನಾದರೂ ಸಾಧಿಸಬೇಕೆಂದು ಕುರಿ ಸಾಕಾಣಿಕೆಗೆ ಮುಂದಾಗಿ ಯಶಸ್ಸು ಕಂಡಿದ್ದಾರೆ. ಮಾರುತಿಯ ಸಾಧನೆಗೆ ಹಲವಾರು ಪ್ರಶಸ್ತಿಗಳು ಹುಡುಕಿ ಬರುತ್ತಿದ್ದು, ಕೃಷಿ ಮೇಳದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕುರಿ, ಆಡು ಸಾಕಾಣಿಕೆ ಕುರಿತು ಉಪನ್ಯಾಸವನ್ನು ಕೂಡ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಪದವಿ ಪಡೆದು ನೌಕರಿ ಸಿಗುತ್ತಿಲ್ಲ ಎಂದು ಹೇಳುವ ಯುವಕರಿಗೆ ಮಾರುತಿ ಮರಡಿ ಸಾಧನೆಗೆ ಹಲವು ಕ್ಷೇತ್ರಗಳಿವೆ ಎಂಬುವುದನ್ನು ತೋರಿಸಿ ಕೊಟ್ಟಿದ್ದಾರೆ.