ಚಿಕ್ಕಮಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಶಾಸಕ ಸಿಟಿ ರವಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಸಾಲ ಮನ್ನ ಮಾಡಬೇಕೆಂದು ಬಿಜೆಪಿ ಕರೆ ನೀಡಿದ್ದ ಬಂದ್‍ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಆರೂವರೆ ಕೋಟಿ ಜನರ ಮುಲಾಜಿನಲ್ಲಿ ಇಲ್ಲ, ಕಾಂಗ್ರೆಸ್ಸಿನ ಮುಲಾಜಿನಲ್ಲಿ ಇದ್ದೇನೆ ಅನ್ನೋದಾದ್ರೆ, ಅವರು ಖರ್ಚು ಮಾಡುತ್ತಿರುವ ಹಣ ದೇವೇಗೌಡರ ಮನೆಯದ್ದೂ ಅಲ್ಲ, ಸೋನಿಯಾ ಗಾಂಧಿ ಮನೆಯದ್ದೂ ಅಲ್ಲ. ಆರೂವರೆ ಕೋಟಿ ಜನರ ತೆರಿಗೆ ಹಣ. ಜನರ ಹಣವನ್ನ ಖರ್ಚು ಮಾಡಿದ ಮೇಲೆ ರೈತರ ಸಾಲವನ್ನ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Advertisement
Advertisement
ಕುಮಾರಸ್ವಾಮಿಗೆ ರೈತರು ಒಂದು ತಿಂಗಳ ಸಮಯ ನೀಡಲು ಸಿದ್ಧರಿದ್ರು. ಆದ್ರೆ, ಅವ್ರು ನಿಯೋಜಿತ ಸಿಎಂ ಆಗಿದ್ದಾಗ್ಲೆ, ನನಗೆ ಜನಾದೇಶ ನೀಡಿಲ್ಲ. ನಾನು ಜನರ ಮುಲಾಜಿನಲ್ಲಿ ಇಲ್ಲ. ಕಾಂಗ್ರೆಸ್ ಮುಲಾಜಿನಲ್ಲಿ ಇದ್ದೇನೆ ಎಂದು ಮಾತಿನ ವರಸೆ ಚೆಂಜ್ ಮಾಡಿದ್ರಿಂದಾಗಿ, ಅವರು ಕೊಟ್ಟ ಮಾತನ್ನ ಮಾರೆಯಬಾರದು. ರೈತರಿಗೆ ಅನ್ಯಾಯವಾಗಬಾರದೆಂದು ಈ ಪ್ರತಿಭಟನೆ ಎಂದ್ರು.
Advertisement
ಒಂದು ವಾರದಲ್ಲಿ ಸಾಲ ಮನ್ನಾ ಮಾಡದಿದ್ರೆ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಕುತ್ತಿಗೆ ಪಟ್ಟು ಹಿಡಿದು, ಜುಟ್ಟು ಹಿಡಿದಾಗ್ಲಿ ಸಾಲ ಮನ್ನ ಮಾಡ್ಸೋ ಕೆಲಸ ಮಾಡ್ತಾರೆಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
Advertisement
ಸಾಂದರ್ಭಿಕ ಕೂಸು ಎನ್ನುತ್ತಾ ಸಂಧರ್ಭ ನೋಡಿಕೊಂಡು ಮಾತನಾಡುವ ಕುಮಾರಸ್ವಾಮಿಯವರಿಗೆ ಇಷ್ಟು ಸೊಕ್ಕಾದ್ರೆ, 21 ರಾಜ್ಯ ಗೆದ್ದಿರೋ ನಮಗೆಷ್ಟು ಸೊಕ್ಕಿರಬೇಡ.
— C T Ravi ???????? ಸಿ ಟಿ ರವಿ (@CTRavi_BJP) May 25, 2018