ಚಿಕ್ಕಮಗಳೂರು: ಮಾಲ್ಗುಡಿ ಡೇಸ್ ಚಿತ್ರ ವಿಭಿನ್ನವಾದ ಅನುಭವ ನೀಡಿದೆ ಎಂದು ನಟ ವಿಜಯ ರಾಘವೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಲವು ಚಿತ್ರಗಳಲ್ಲಿ ಯುವಕನ ಪಾತ್ರ ಮಾಡಿದ್ದೇನೆ. ಆದರೆ, 70 ವರ್ಷ ವಯಸ್ಸಿನ ಈ ಪಾತ್ರ ಹೊಸ ಅನುಭವ ನೀಡಿದೆ ಎಂದು ಚಿತ್ರದ ಸಾಹಿತಿ ಲಕ್ಷ್ಮಿ ನಾರಾಯಣ ಪಾತ್ರದ ಬಗೆಗಿನ ಅನುಭವವನ್ನ ಹಂಚಿಕೊಂಡಿದ್ದಾರೆ.
Advertisement
ಹಲವು ಚಿತ್ರಗಳಲ್ಲಿ ನಟಿಸಿದ್ದರೂ ಮಾಲ್ಗುಡಿ ಡೇಸ್ ಚಿತ್ರದ ಪಾತ್ರ ಸವಾಲಾಗಿತ್ತು. 70 ವರ್ಷ ವಯಸ್ಸಿನ ಹಾವ-ಭಾವವನ್ನ ನಿರ್ವಹಿಸಬೇಕಿತ್ತು. ಪಾತ್ರಕ್ಕೆ ತಕ್ಕಂತೆ ಇಂಗ್ಲೆಂಡ್‍ನಲ್ಲಿ ತರಬೇತಿ ಪಡೆದಿರೋ ಮೇಕಪ್ ಕಲಾವಿದ ರೋಷನ್ ಚೆನ್ನಾಗಿ ಮೇಕಪ್ ಮಾಡಿದ್ದಾರೆ. ಚಿತ್ರಕ್ಕೆ ಹೊಂದುವ ಮೇಕಪ್ ಮಾಡಲು 4 ಗಂಟೆ ಬೇಕಾಗುತ್ತಿತ್ತು. ತದನಂತರ ಶೂಟಿಂಗ್‍ನಲ್ಲಿ ಭಾಗವಹಿಸುತ್ತಿದ್ದೆ ಎಂದರು.
Advertisement
Advertisement
ನಿರ್ದೇಶಕ ಕಿಶೋರ್ ಮಾಡಬಿದರೆ ಮಾತನಾಡಿ, ನಾನು ಈಗಾಗಲೇ ತುಳುವಿನಲ್ಲಿ ‘ಅಪ್ಪೆ ಟೀಚರ್’ ಚಿತ್ರವನ್ನು ನಿರ್ದೇಶಿಸಿದ್ದೇನೆ. ಇದು ನನ್ನ ಎರಡನೇ ಚಿತ್ರವಾಗಿದೆ. ದಕ್ಷಿಣ ಕನ್ನಡದ ಕಥೆಯಾಗಿರೋ ಮಾಲ್ಗುಡಿ ಡೇಸ್, ಕಳಸ, ಹೊರನಾಡು, ತೀರ್ಥಹಳ್ಳಿ, ಶಿವಮೊಗ್ಗದಲ್ಲ ಚಿತ್ರೀಕರಣ ನಡೆಸಲಾಗಿದೆ ಎಂದರು.
Advertisement
ಮಾಲ್ಗುಡಿ ಊರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಥೆ ಸಾಗಿದ್ದು, ಸಾಹಿತಿ ಆರ್.ಕೆ.ನಾರಾಯಣ ಬರೆದಿದ್ದ ಶಂಕರನಾಗ್ ನಿರ್ದೇಶಿಸಿದ ಮಾಲ್ಗುಡಿ ಡೇಸ್ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಈ ಚಿತ್ರದ ಕಥೆಯೇ ಬೇರೆ. ಈ ಚಿತ್ರದಲ್ಲಿ ಬರುವ ಸಾಹಿತಿ ಲಕ್ಷ್ಮಿನಾರಾಯಣ ಮಾಲ್ಗುಡಿಯವರು ತಮ್ಮ ನಿವೃತ್ತಿಯ ನಂತರ ಏನು ಮಾಡುತ್ತಾರೆ ಅನ್ನೋದು ಚಿತ್ರದ ಒನ್ ಲೈನ್ ಸ್ಟೋರಿ. 2019ರ ಫೆಬ್ರವರಿಯಿಂದ 3 ಹಂತದಲ್ಲಿ 65 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಇದೇ ಫೆಬ್ರವರಿ 7ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆಕಾಣಲಿದೆ ಎಂದರು.
ಈ ಚಿತ್ರದಲ್ಲಿ ನಟ ವಿಜಯ್ ರಾಘವೇಂದ್ರ ಎರಡು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರೀಷ್ಮಾ ಚಿತ್ರದ ನಾಯಕಿಯಾಗಿದ್ದಾರೆ. ಇವರೊಂದಿಗೆ ಸ್ಥಳಿಯ ಕಲಾವಿದರಿಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಜಿಲ್ಲೆಯ ಕಡೂರಿನ ಶೃತಿ ಅಜ್ಜಂಪುರ ಅವರು ಚಿತ್ರದಲ್ಲಿ ನಟಿಸಿದ್ದಾರೆ. ಈ ಮಾಲ್ಗುಡಿ ಡೇಸ್ ನಮ್ಮ ಜೀವನದ ಪ್ರತಿ ಹಂತವನ್ನು ನೆನಪಿಸುವ ಕಥೆಯಾಗಿದ್ದು, ರತ್ನಾಕರ್ ಕಾಮತ್ ನಿರ್ಮಾಪಕರಾದ್ರೆ, ಚಿತ್ರಕ್ಕೆ ಗಗನ್ ಬಡೇರಿಯಾರವರ ಸಂಗೀತವಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ನಗರ ಎಂ.ಇ.ಎಸ್. ಕಾಲೇಜಿಗೆ ತೆರಳಿ ವಿದ್ಯಾರ್ಥಿಯರಿಗೆ ಚಿತ್ರದ ಬಗ್ಗೆ ಪ್ರಮೋಷನ್ ಮಾಡಿ, ಹಾಡು ಹೇಳಿ ರಂಜಿಸಿದ್ದರು.