ಬೆಂಗಳೂರು: ಚಿಕ್ಕಮಗಳೂರಿನಲ್ಲಿ (Chikkamgaluru) ವಕೀಲರು ಹಾಗೂ ಪೊಲೀಸರ ಜಟಾಪಟಿ ತಾರಕಕ್ಕೇರಿದೆ. ಬೆಂಗಳೂರಲ್ಲಿ (Bengaluru) ತುರ್ತು ಸಭೆ ನಡೆಸಿದ ರಾಜ್ಯ ಬಾರ್ ಕೌನ್ಸಿಲ್ (Bar Council) ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.
ಕೋರ್ಟ್‌ನಲ್ಲಿ ಕೇಸ್ ಇದ್ದರೂ ಆರೋಪಿ ಪೊಲೀಸರನ್ನು ರಿಲೀಸ್ ಮಾಡಿರುವುದಕ್ಕೆ ಆಕ್ರೋಶ ಹೊರಹಾಕಿದೆ. ಇದೇ ವೇಳೆ, ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ ಸುಧಾಕರ್ ಹಾಗೂ ಇತರರ ವಿರುದ್ಧದ ಕೇಸ್‌ಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದನ್ನೂ ಓದಿ: ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿದ ಅರ್ಜುನ – ನಡೆದಿದ್ದೇನು?
ಹಲ್ಲೆಗೊಳಗಾದ ಮತ್ತು ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ವಕೀಲ ಪ್ರೀತಂ ವಿರುದ್ಧದ ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಚಿಕ್ಕಮಗಳೂರಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಅಣ್ಣಯ್ಯ ಕರೆದಿದ್ದ ಸುದ್ದಿಗೋಷ್ಠಿಗೆ ಪೊಲೀಸರು ಅನುಮತಿ ನಿರಾಕರಿಸಿ ಬಲವಂತವಾಗಿ ಕರೆದೊಯ್ದರು. ಹಿರಿಯ ಅಧಿಕಾರಿಗಳ ನಡೆಗೆ ಅಣ್ಣಯ್ಯ ಆಕ್ರೋಶ ಹೊರಹಾಕಿದರು. ಈ ಬೆಳವಣಿಗೆ ಆತಂಕಕಾರಿ ಎಂದು ಮಾಜಿ ಸಿಎಂ ಬೊಮ್ಮಾಯಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.