ಚಿಕ್ಕಮಗಳೂರು: ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ (M.P. Kumaraswamy) ವಿರುದ್ಧ ಜಾಮೀನು (Bail) ರಹಿತ ವಾರೆಂಟ್ (Warrant) ಜಾರಿ ಆಗಿದೆ.
ಚೆಕ್ ಬೌನ್ಸ್ ಪ್ರಕರಣದ (Check Bounce Case) ವಿಚಾರಣೆಗೆ ಅನಾರೋಗ್ಯದ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದ ಕುಮಾರಸ್ವಾಮಿ, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ 42ನೇ ಎಸಿಎಂಎಂ ಕೋರ್ಟ್ (ACMM Court) ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಇದನ್ನೂ ಓದಿ: CET ಬಿಕ್ಕಟ್ಟು ಶಮನ – ಸರ್ಕಾರದ ಸಮನ್ವಯ ಸೂತ್ರಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್
Advertisement
Advertisement
ಈ ಬಗ್ಗೆ ಕೋರ್ಟ್‍ಗೆ ಪತ್ರಿಕಾ ವರದಿಯನ್ನು ದೂರುದಾರ ಹೂವಪ್ಪಗೌಡ ಸಲ್ಲಿಸಿದ್ದರು. ಹೀಗಾಗಿ ಹಾಜರಾತಿಯಿಂದ ವಿನಾಯಿತಿ ನೀಡಲು ಕೋರ್ಟ್ ನಕಾರ ಮಾಡಿದೆ. ಅಕ್ಟೋಬರ್ 10ರಂದು ಎಂ.ಪಿ. ಕುಮಾರಸ್ವಾಮಿ ಹಾಜರು ಪಡಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ದೆಹಲಿ ಏಮ್ಸ್ ನಿರ್ದೇಶಕರಾಗಿ ಕನ್ನಡಿಗ ಶ್ರೀನಿವಾಸ್ ನೇಮಕ