– ತಮಿಳುನಾಡು ಪೊಲೀಸರು ಭೇದಿಸಲಾಗದೇ ಕೈಚೆಲ್ಲಿದ್ದ ಕೇಸ್
ಚಿಕ್ಕಬಳ್ಳಾಪುರ: ಅದು 6 ವರ್ಷಗಳ ಹಿಂದೆ ನಡೆದ ಕಿಡ್ನಾಪ್ ಮತ್ತು ಕೊಲೆ ಪ್ರಕರಣ. ಆರು ವರ್ಷ ಕಳೆದ್ರೂ ನಿಗೂಢವಾಗಿ ಕಾಣೆಯಾಗಿದ್ದ ಆಟೋ ಚಾಲಕನ ಕೊಲೆ ಆಗಿದೆ ಅಂತ ಗೊತ್ತಿದ್ರೂ, ಆರೋಪಿಗಳ ಬಂಧನ ಆಗೇ ಇರಲಿಲ್ಲ. ಮನೆಯವರು ಸಹ ಸತ್ತವನು ಸತ್ತ ಅಂತ ಸುಮ್ಮನಾಗಿದ್ರು. ಇನ್ನೂ ಕೊಲೆ ಮಾಡಿದವರು ಸಹ ಆರಾಮಾಗಿ ಕೆಲಸ ಕಾರ್ಯ ಮಾಡಿಕೊಂಡು ಒಡಾಡಿಕೊಂಡು ಇದ್ರು. ಆದ್ರೆ 6 ವರ್ಷಗಳ ನಂತರ ಕೊಲೆ ಮಾಡಿದ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಲಾಗಿದೆ.
ಹೌದು. ಹೀಗೆ ಪೊಲೀಸರ ಅತಿಥಿಗಳಾಗಿ ಜೈಲು ಸೇರಿರೋ ಆರೋಪಿಗಳ ಹೆಸರು ಹರೀಶ್ ಅಲಿಯಾಸ್ ಅಫಲ್, ದಿವಾಕರ್, ಮಾರ್ತಾಂಡಾ ಅಲಿಯಾಸ್ ಕೊಂಡಾ, ರಂಜಿತ್ ಕುಮಾರ್ ಅಲಿಯಾಸ್ ಎಗ್ ರೈಸ್ ರಂಜಿತ್, ಮಂಜುನಾಥ ಅಲಿಯಾಸ್ ಕಾಡೆಮ್ಮೆ ಅಂತ. ಇದನ್ನೂ ಓದಿ: ಸಮೀರ್‌ಗೆ ತಪ್ಪದ ಸಂಕಷ್ಟ – ಕಡೂರು ಠಾಣೆಯಲ್ಲಿ ಮತ್ತೊಂದು ದೂರು!
ಅಂದಹಾಗೆ ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪೊಲೀಸರ ಅತಿಥಿಗಳಾಗಿ ಜೈಲು ಸೇರಿರೋ ಈ ಆರೋಪಿಗಳು 6 ವರ್ಷಗಳಿಂದ ತಮಗೇನು ಗೊತ್ತೆ ಇಲ್ಲ. ತಾವ್ಯಾರನ್ನ ಮರ್ಡರ್ ಮಾಡೇ ಇಲ್ಲ ಕಿಡ್ನಾಪ್ ಅಂತೂ ಮೊದಲೇ ಮಾಡಿಲ್ಲ ಅನ್ನೋ ಹಾಗೆ ಜೀವನ ರೂಪಿಸಿಕೊಂಡು ಒಡಾಡಿಕೊಂಡಿದ್ರು. ಆದ್ರೆ 6 ವರ್ಷಗಳ ನಂತರ ಈಗ ಆರೋಪಿಗಳು ಮಾಡಿರೋ ಕಿಡ್ನಾಪ್ ಕೊಲೆ ಪ್ರಕರಣ ಬಯಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಸವಾರರಿಗೆ ಗುಡ್‌ನ್ಯೂಸ್ – ದಂಡ ಪಾವತಿಗೆ 50% ಡಿಸ್ಕೌಂಟ್
5 ಮಂದಿ ಆರೋಪಿತರು ಸೇರಿದಂತೆ ತಲೆ ಮರೆಸಿಕೊಂಡಿರೋ ಮಹೇಶ್ ಅಲಿಯಾಸ್ ಹಂಡಿಗನಾಳ ಮಹೇಶ. ಹಾಗೂ ತಮಿಳುನಾಡು ಪೊಲೀಸರ ಬಂಧಿಸಿರೋ ಜಾಕಿ ಅಲಿಯಾಸ್ ಶಿವಶಂಕರ್ ಹಾಗೂ ಇತರರು ಸೇರಿ ಶಿಡ್ಲಘಟ್ಟ ಪಟ್ಟಣದ ರಾಜೀವ್ ಗೌಡ ಬಡಾವಣೆಯ ನಿವಾಸಿ 27 ವರ್ಷದ ಗಿರೀಶ್ ನನ್ನ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ರು. ಶಿಡ್ಲಘಟ್ಟಲ್ಲಿ ಕಿಡ್ನಾಪ್ ಮಾಡಿದ ಆರೋಪಿಗಳು ಗಿರೀಶ್ ನನ್ನ ಕೋಲಾರದ ನರಸಾಪುರ ಹೊಸಕೋಟೆ ಮಾಲೂರು ಮಾರ್ಗದಲ್ಲಿ ಕಾರಿನಲ್ಲಿ ಕಿಡ್ನಾಪ್ ಮಾಡಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ರು. ಬಳಿಕ ಮೃತದೇಹವನ್ನ ತಮಿಳುನಾಡಿನ ಡೆಂಕಣಿಕೋಟೆ ಬಳಿಯ ತಳಿ ರಸ್ತೆಯ ಕೆರೆಯೊಂದರಲ್ಲಿ ಬಿಸಾಡಿ ಬಂದಿದ್ರು. ಅನ್ನೋದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಕೇಸ್ ಹಿನ್ನೆಲೆ ಏನು?
2019ರ ಮೇ 12ರಂದು ಗಿರೀಶ್‌ನನ್ನ ಕಿಡ್ನಾಪ್ ಮಾಡಲಾಗಿತ್ತು. ಕೊಲೆಯಾದ ಗಿರೀಶ್ ಶಿಡ್ಲಘಟ್ಟ ಬಸ್ ನಿಲ್ದಾಣದ ಬಳಿ ಆಟೋ ಚಾಲಕನಾಗಿದ್ದ. ಆರೋಪಿಗಳಾದ ಜಾಕಿ, ಹರೀಶ್ ಜೊತೆ ಗಿರೀಶ್ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದ. ಮೂರ್ನಾಲ್ಕು ಬಾರಿ ಜಗಳಗಳಾಗಿದ್ದು ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಜಾಕಿ ಹಾಗೂ ಹರೀಶ್. ಪ್ಲ್ಯಾನ್ ಪ್ಲಾನ್ ಮಾಡಿ ಗಿರೀಶ್ ಕೊಲೆ ಮಾಡೋಕೆ ಸಂಚು ರೂಪಿಸಿದ್ರು. ಅಪರಿಚಿತ ಮೃತದೇಹ ಸಿಕ್ಕ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ತಮಿಳುನಾಡಿನ ತಳಿ ಪೊಲೀಸರು 6 ವರ್ಷಗಳ ಕಾಲ ತನಿಖೆ ಮಾಡಿದ್ರೂ ಸೂಕ್ತ ತನಿಖೆ ನಡೆಸಿರಲಿಲ್ಲ. ಕೊನೆಗೆ ಕರ್ನಾಟಕಕ್ಕೆ ಕೇಸ್ ವರ್ಗಾವಣೆ ಮಾಡಿದ್ದು, ಈಗ ಶಿಡ್ಲಘಟ್ಟ ಪೊಲೀಸರು ಪ್ರಕರಣದಲ್ಲಿನ 5 ಮಂದಿ ಆರೋಪಿಗಳನ್ನ ಬಂಧಿಸಿದ್ದು. ಮತ್ತೋರ್ವ ಆರೋಪಿ ಮಹೇಶ್ ಅಲಿಯಾಸ್ ಹಂಡಿಗನಾಳ ಮಹೇಶ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಮುಧೋಳ-ಯಾದವಾಡ ಸಂಪರ್ಕ ಕಡಿತ – ಘಟಪ್ರಭೆಗೆ ಹರಿದು ಬರುತ್ತಿದೆ 62 ಸಾವಿರ ಕ್ಯೂಸೆಕ್ ನೀರು