ಚಿಕ್ಕಬಳ್ಳಾಪುರ: ಪ್ರೇಮಿಗಳ ದಿನ ತಮ್ಮ ಗೆಳತಿ, ಗೆಳತಿಗೆ ಪ್ರೇಮ ನಿವೇದನೆ ಮಾಡೋಣ, ಒಟ್ಟಿಗೆ ಸಮಯದ ಕಳೆಯೋಣ ಎಂದು ಬೈಕ್, ಕಾರುಗಳಲ್ಲಿ ನಂದಿಗಿರಿಧಾಮಕ್ಕೆ ಬರುತ್ತಿದ್ದ ಪ್ರೇಮಿಗಳಿಗೆ, ದಾರಿ ಮಧ್ಯೆ ಇನ್ನಿಲ್ಲದ ಸಮಸ್ಯೆ ಎದುರಾಗಿತ್ತು.
ವಿಶ್ವವಿಖ್ಯಾತ ನಂದಿ ಗಿರಿಧಾಮಕ್ಕೆ ಬರುತ್ತಿದ್ದ ವಾಹನಗಳನ್ನು ತಡೆದ ಪೊಲಿಸರು, ಹೆಲ್ಮೆಟ್, ಡಿ.ಎಲ್, ಮಿರರ್ ಅಂತ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದರು. ಇದರಿಂದ ಪ್ರೇಮಿಗಳು, ಪೊಲೀಸರ ಸಹವಾಸವೇ ಬೇಡ ಅಂತ ಅತ್ತ ಬೆಟ್ಟದ ಮೇಲೆ ಹೋಗಲಾಗದೆ ಇತ್ತ ಕೆಳಗೆ ಇಳಿಯಲಾಗದೆ ದಾರಿ ಮಧ್ಯೆ ಪರದಾಡಿದರು.
Advertisement
Advertisement
ಫೆ.14, ವಿಶ್ವ ಪ್ರೇಮಿಗಳ ದಿನ. ಪ್ರೇಮಿಗಳಿಗೂ ಚಿಕ್ಕಬಳ್ಳಾಪುರದ ತಾಲೂಕಿನ ನಂದಿಹಿಲ್ಸ್ ಗೂ ಏನೊ ಒಂಥರ ನಂಟು. ಪ್ರತಿದಿನ ಸಾವಿರಾರು ಜನ ಪ್ರೇಮಿಗಳು ನಂದಿ ಗಿರಿಧಾಮಕ್ಕೆ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಇಂದು ಎರೆಡು ಕರೆ ಪೊಲೀಸರು ರಸ್ತೆಗೆ ಅಡ್ಡಲಾಗಿ ನಿಂತು ಬೆಟ್ಟಕ್ಕೆ ಬರುವ ವಾಹನಗಳ ದಾಖಲೆ ಪರಿಶೀಲನೆ ನಡೆಸುತ್ತಿದ್ದರು. ಅಲ್ಲದೇ ದಾಖಲೆಗಳು ಇಲ್ಲ ಎಂದರೇ ಮುಲಾಜಿಲ್ಲದೇ ದಂಡ ವಿಧಿಸುತ್ತಿದ್ದರು.
Advertisement
ಪೊಲೀಸರನ್ನು ಕಂಡ ಹಲವರು ದಾರಿ ನಡುವೆಯೇ ವಾಪಸ್ ಆಗುತ್ತಿದ್ದ ದೃಶ್ಯಗಳು ಕೂಡ ಕಂಡು ಬಂತು. ಪೊಲೀಸರ ಕ್ರಮದಿಂದ ಬೆಟ್ಟದ ಮೇಲೆ ಬರುವವರ ಸಂಖ್ಯೆಯೂ ಸಹ ವಿರಳವಾಗಿತ್ತು. ಬೆಳಿಗ್ಗೆಯಿಂದಲೂ ನಂದಿಗಿರಿಧಾಮಕ್ಕೆ ಬರುತ್ತಿದ್ದ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರು ದಾಖಲೆ ಇಲ್ಲದ ಸವಾರರಿಗೆ ದಂಡ ವಿಧಿಸುತ್ತಿದ್ದರು. ಪ್ರತಿ ವರ್ಷ ಪ್ರೇಮಿಗಳ ದಿನದಂದು ನಂದಿಗಿರಿಧಾಮ ಪ್ರೇಮಿಗಳ ಜಾತ್ರೆಯಂತೆ ಕಾಣುತ್ತಿತ್ತು. ಆದರೆ ಈ ಬಾರಿ ಪ್ರೇಮಿಗಳ ಕೊರತೆಯಿಂದ ಗಿರಿಧಾಮವೇ ಸೊರಗಿದಂತಿತ್ತು ಎಂದು ನಂದಿಗಿರಿಧಾಮದ ವಿಶೇಷಾಧಿಕಾರಿ ಗೋಪಾಲ್ ಪಬ್ಲಿಕ್ ಟಿವಿಗೆ ತಿಳಿಸಿದರು.