ಚಿಕ್ಕಬಳ್ಳಾಪುರ: ಜೆಡಿಎಸ್ (JDS) ಮುಖಂಡ ಎನ್.ವೆಂಕಟೇಶ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಚಿಕ್ಕಬಳ್ಳಾಪುರ (Chikkaballapura) ಗ್ರಾಮಾಂತರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಧನು ಅಲಿಯಾಸ್ ಧನರಾಜ್ ಹಾಗೂ ಆತನ ಸಹಚರ ಸತೀಶ್ ಎಂದು ಗುರುತಿಸಲಾಗಿದೆ. ಹಳೆಯ ದ್ವೇಷ ಹಿನ್ನಲೆ ಹತ್ಯೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ಮಾಹಿತಿ ನೀಡಿದ್ದಾರೆ.
Advertisement
Advertisement
ವೆಂಕಟೇಶ್ ತೆರಳುತ್ತಿದ್ದ ಸ್ಕೂಟಿಯನ್ನು ಅಡ್ಡಗಟ್ಟಿದ್ದ ಧನರಾಜ್ ಹಾಗೂ ಸತೀಶ್ ಮೊದಲು ಹಂದಿ ಕೊಯ್ಯುವ ಚಾಕುವಿನಿಂದ ಬೆನ್ನಿಗೆ ಇರಿದಿದ್ದರು. ನಂತರ ಹೊಟ್ಟೆ, ಮುಖಕ್ಕೆ ಮೂರು ಬಾರಿ ಹೊಡೆದಿದ್ದರು. ಅಲ್ಲದೇ ಕೈ ಕಟ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ ಆರೋಪಿಗಳು ಬೆಂಗಳೂರಿನಲ್ಲಿ ರೂಮ್ ಮಾಡಿಕೊಂಡಿದ್ದರು. ಆರೋಪಿಗಳನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
Advertisement
Advertisement
ಕೊಲೆಗೆ ಕಾರಣ ಏನು?
ಎಂಪಿ ಚುನಾವಣೆಯಲ್ಲಿ ಅರವಿಂದ್ ಎಂಬವರಿಗೆ ಹಣ ನೀಡಲಿಲ್ಲ ಎಂದು ಚುನಾವಣೆ ವೇಳೆ ಬಾರ್ ಒಂದರಲ್ಲಿ ಗಲಾಟೆ ನಡೆದಿತ್ತು. ಈ ವೇಳೆ ಧನು ಹಾಗೂ ಅರವಿಂದ್‍ಗೆ ವೆಂಕಟೇಶ್ ಹಿಗ್ಗಾ ಮುಗ್ಗಾ ಹೊಡೆದಿದ್ದ. ನಂತರ ಧನು ಪರವಾಗಿ ವೆಂಕಟೇಶ್ ಬಳಿ ರಾಜೀ ಮಾಡಲು ಮುಂದಾಗಿದ್ದ ಸತೀಶ್‍ಗೂ ಹೊಡೆದು ಕಳಿಸಿದ್ದ. ಇದಾದ ಬಳಿಕ ಧನು, ಸತೀಶ್ ಹಾಗೂ ಅರವಿಂದ್ ಎಲ್ಲಿ ಸಿಕ್ಕರೂ ವೆಂಕಟೇಶ್ ವಾರ್ನಿಂಗ್ ಕೊಡ್ತಿದ್ದ. ದೂರು ಕೊಟ್ರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಆವಾಜ್ ಹಾಕಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ವೆಂಕಟೇಶ್‍ನನ್ನು ಆರೋಪಿಗಳು ಜ.3ರ ರಾತ್ರಿ ಹತ್ಯೆ ಮಾಡಿದ್ದರು.