ಚಿಕ್ಕಬಳ್ಳಾಪುರ: ವಿಶ್ವದೆಲ್ಲೆಡೆ ಕೊರೊನಾ ವೈರಸ್ ಆತಂಕ ಸೃಷ್ಟಿ ಮಾಡಿದೆ. ಆದರೆ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಮಾತ್ರ ಕೊರೊನಾ ವೈರಸ್ ಭೀತಿ ಅಷ್ಟಕ್ಕಷ್ಟೇ ಎಂಬಂತಿತ್ತು.
ವೀಕೆಂಡ್ ಹಿನ್ನೆಲೆಯಲ್ಲಿ ಬೆಂಗಳೂರಯ ಸಮೀಪದ ನಂದಿಗಿರಿಧಾಮಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸಿದ್ದರು. ಎಂದಿನಂತೆ ಇಂದು ಸಹ ಸಾಕಷ್ಟು ಮಂದಿ ಪ್ರವಾಸಿಗರು ನಂದಿಗಿರಿಧಾಮಕ್ಕೆ ಆಗಮಿಸಿ ನಂದಿಬೆಟ್ಟದ ಸೊಬಗು ಸವಿದು ತೆರಳಿದರು. ಕೊರೊನಾ ವೈರಸ್ ಹರುಡುವ ಆತಂಕದ ಹಿನ್ನಲೆ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಮಾಸ್ಕ್ ಧರಿಸಿ ಆಗಮಿಸಿದ್ದು ಕಂಡುಬಂತು.
Advertisement
Advertisement
ಬೆಂಗಳೂರಿನಲ್ಲಿ ಕೊರೊನಾ ಭೀತಿಗೆ ಮಾಲ್ ಗಳತ್ತ ಸುಳಿದಾಡದ ಜನ ಇತ್ತ ದೂರದ ನಂದಿಗಿರಿಧಾಮಕ್ಕೆ ಬಂದು ಎಂಜಾಯ್ ಮಾಡಿದರು. ಬೆಳ್ಳಂಬೆಳಗ್ಗೆ ನಂದಿಗಿರಿಧಾಮಕ್ಕೆ ಸಾವಿರಾರು ಮಂದಿ ಬಂದು ವಾಪಸ್ ಹೋದರು. ಮಧ್ಯಾಹ್ನದ ತರುವಾಯ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು.
Advertisement
Advertisement
ಈ ಬಗ್ಗೆ ಮಾತನಾಡಿದ ನಂದಿಗಿರಿಧಾಮದ ವಿಶೇಷಾಧಿಕಾರಿ ಗೋಪಾಲ್, ನಂದಿಗಿರಿಧಾಮಕ್ಕೆ ಇಂದು ಎಂದಿನಂತೆ ಪ್ರವಾಸಿಗರು ಆಗಮಿಸಿದ್ದು, ಯಾವುದೇ ಆತಂಕ ಭೀತಿ ಇರಲಿಲ್ಲ. ಕೆಲವರು ಮಾತ್ರ ಮಾಸ್ಕ್ ಧರಿಸಿ ಆಗಮಿಸಿದ್ದು, ಉಳಿದಂತೆ ಎಂದಿನಂತೆ ಪ್ರವಾಸಿಗರು ಆಗಮಿಸಿ ನಂದಿಗಿರಿಧಾಮದ ಸೌಂದರ್ಯ ಕಣ್ತುಂಬಿಕೊಂಡಿರುವುದಾಗಿ ತಿಳಿಸಿದರು.