ಚಿಕ್ಕಬಳ್ಳಾಪುರ: ಕೋಚಿಮುಲ್ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರಿಗೆ ಮುಖಭಂಗವಾಗಿದ್ದು, ಈ ಸಂಬಂಧ ಶಾಸಕರ ಬೆಂಬಲಿಗ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಚಿಕ್ಕಬಳ್ಳಾಪುರ ಕೋಚಿಮುಲ್ ನಿರ್ದೇಶಕ ಸ್ಥಾನವು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಪಾಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಬಗ್ಗೆ ಸುಧಾಕರ್ ಬೆಂಬಲಿಗರಾದ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಚನ್ನಕೇಶವ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ದ್ಯಾವಪ್ಪ ಮೊಬೈಲ್ ಮೂಲಕ ಮಾತನಾಡಿದ್ದಾರೆ. ಈ ಇಬ್ಬರ ನಡುವಿನ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಂಭಾಷಣೆಯಲ್ಲಿ ಕೆಲ ಕೀಳುಮಟ್ಟದ ಪದ ಪ್ರಯೋಗ ಮಾಡಿರುವ ಬೆಂಬಲಿಗರು ಏನಣ್ಣ ಹೀಗಾಗಾಯ್ತೋ? ಜೆಡಿಎಸ್‍ನವರಿಗೆ ಎಷ್ಟು ಬೇಗ ರೆಕ್ಕೆ ಪುಕ್ಕ ಬಂದುಬಿಡ್ತು, ನಮ್ಮ ಜೊತೆ 98 ಮಂದಿ ಮತದಾರರಿದ್ದರು. ನಮ್ಮ ಜೊತೆ ಬಂದರು ಆಣೆ, ಪ್ರಮಾಣ ಮಾಡಿದರು. ಆದರೆ ಅದರಲ್ಲಿ ಕೆಲವರು ಜೆಡಿಎಸ್‍ನವರಿಗೆ ಮತ ಹಾಕಿಬಿಟ್ಟು ದ್ರೋಹ ಮಾಡಿದ್ದಾರೆ ಎಂದು ಮಾತನಾಡಿದ್ದಾರೆ.
ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿಯ ಕೆಲ ಒಡಕುಗಳನ್ನು ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್‍ನ ಅಕ್ರಮವಾಗಿ ಹಣ ಮಾಡಿದ್ದಾರೆ. ನಮ್ಮ ಶಾಸಕರು ಏನು ಮಾಡಲಿಲ್ಲ. ಆದರೂ ಕರೆ ಮಾಡಿ ಸಾಕಷ್ಟು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾತನಾಡಿರುವುದು ಆಡಿಯೋದಲ್ಲಿದೆ.
ಈ ಚುನಾವಣೆ ಶಾಸಕ ಸುಧಾಕರ್ ಅವರಿಗೆ ಸಾಕಷ್ಟು ಪ್ರತಿಷ್ಠೆಯಾಗಿತ್ತು. ಆದರೆ ಕಾಂಗ್ರೆಸ್‍ಗೆ ಭಾರೀ ಹಿನ್ನಡೆಯಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. 7 ನಿಮಿಷ 56 ಸೆಕೆಂಡಿನ ಈ ಆಡಿಯೋ ವೈರಲ್ ಆಗಿದ್ದು, ಇದು ಜೆಡಿಎಸ್‍ನವರಿಗೆ ಒಂದು ರೀತಿಯ ಆಶ್ರಯವಾಗಿವಾಗಿದೆ.