ತೆಲಂಗಾಣದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಪ್ರತಿಭಟನೆ

Public TV
1 Min Read
pradeep eshwar protest 5

ಚಿಕ್ಕಬಳ್ಳಾಪುರ: ಕರ್ನಾಟಕದ ಕಾಂಗ್ರೆಸ್‌ ಗ್ಯಾರಂಟಿಗಳ (Congress Guarantee) ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರ ಪಕ್ಷದ ಅಭ್ಯರ್ಥಿಯೊಬ್ಬರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ತೆಲಂಗಾಣದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ (Pradeep Eshwar) ಪ್ರತಿಭಟನೆ ನಡೆಸಿದ್ದಾರೆ.

pradeep eshwar protest 3

ತೆಲಂಗಾಣದಲ್ಲಿ (Telangana) ಕಾಂಗ್ರೆಸ್‌ ಪರವಾಗಿ ಶಾಸಕ ಪ್ರದೀಪ್‌ ಈಶ್ವರ್‌ ಚುನಾವಣಾ ಪ್ರಚಾರದಲ್ಲಿದ್ದರು. ಇದರ ನಡುವೆಯೇ ತೆಲಂಗಾಣ ಸಚಿವ ಪ್ರತಾಪ್ ರೆಡ್ಡಿ ಸ್ವಗ್ರಾಮದ ವೆಲುಪುರದಲ್ಲಿ ಅಂಬೇಡ್ಕರ್‌ ಪ್ರತಿಮೆ ಎದುರು ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಪ್ರದೀಪ್‌ ಈಶ್ವರ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಕಸರತ್ತು – ಅಧ್ಯಕ್ಷರ ಮೊದಲ ಪಟ್ಟಿ ಫೈನಲ್: ಸಭೆಯಲ್ಲಿ ಏನಾಯ್ತು?

pradeep eshwar protest 4

ಶಾಸಕ ಪ್ರದೀಪ್‌ ಈಶ್ವರ್‌, ಬಾಲಕೊಂಡ ಕ್ಷೇತ್ರದಲ್ಲಿ ಚುನಾವಣಾ ಉಸ್ತುವಾರಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುತ್ಯಾಲ ಸುನೀಲ್ ಕುಮಾರ್ ಪರ ಪ್ರಚಾರ ನಡೆಸುತ್ತಿದ್ದಾರೆ. ಇದೇ ಕ್ಷೇತ್ರದ ಕೆಸಿಆರ್‌ ಪಕ್ಷದ ಅಭ್ಯರ್ಥಿ ಪ್ರತಾಪ್ ರೆಡ್ಡಿ ಅವರು ಕರ್ನಾಟಕದ ಕಾಂಗ್ರೆಸ್‌ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡಿದ್ದರು. ಕರ್ನಾಟಕದಲ್ಲೇ ಕಾಂಗ್ರೆಸ್ ಗ್ಯಾರಂಟಿಗಳು ಅನುಷ್ಟಾನ ಆಗಿಲ್ಲ ಎಂದು ಪ್ರಚಾರ ಮಾಡಿದ್ದರು.

ಹೀಗಾಗಿ ಸಚಿವ ಪ್ರತಾಪ್ ರೆಡ್ಡಿ ವಿರುದ್ಧ ಪ್ರದೀಪ್‌ ಈಶ್ವರ್‌ ಕಿಡಿಕಾರಿದ್ದಾರೆ. ರೆಡ್ಡಿ ವಿರುದ್ಧ ಕರ್ನಾಟಕದ ಶಾಸಕ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಫ್ಲೈಟ್ ಟಿಕೆಟ್, ಕಾರು ಎಲ್ಲವೂ ಸಿದ್ಧವಾಗಿದೆ. ಬನ್ನಿ ಕರ್ನಾಟಕಕ್ಕೆ ಹೋಗೋಣ. ಕರ್ನಾಟಕದ ಯಾವುದಾದರೂ ಹಳ್ಳಿಗೆ ಹೋಗೋಣ. ಕರ್ನಾಟಕದಲ್ಲಿ ಗ್ಯಾರಂಟಿಗಳು ಜಾರಿಯಾಗಿಲ್ವಾ ಅಂತ ತೋರಿಸ್ತೀವಿ ಎಂದು ಧರಣಿಗೆ ಕುಳಿತಿರುವ ಪ್ರದೀಪ್‌ ಈಶ್ವರ್‌ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಧೂಳು ಹಿಡಿದ ಲಾರಿಯಲ್ಲಿ ಬೆಲೆ ಬಾಳುವ ಔಷಧಿಗಳ ಸಂಗ್ರಹ

Share This Article