ಚಿಕ್ಕಬಳ್ಳಾಪುರ: ಮಾಜಿ ಸಚಿವ ಕೆ. ಸುಧಾಕರ್ (K Sudhakar) ಅವರ ಚಾಲೆಂಜ್ ಅನ್ನು ಸ್ವೀಕಾರ ಮಾಡಿರುವ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಇದೀಗ ಪ್ರತಿ ಸವಾಲು ಹಾಕಿದ್ದಾರೆ.
ಚಿಕ್ಕಬಳ್ಳಾಪುರ (Chikkaballapur) ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ ಹಂಚಿಕೆ ಪತ್ರ ವಿಚಾರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಸುಳ್ಳು ಅಭಿಯಾನ ಅರಂಭಿಸಿದ್ದಾರೆ. ಹೀಗಾಗಿ ಅವರು ಶ್ರೀ ಭೋಗನಂಧೀಶ್ವರ ದೇವಾಲಯಕ್ಕೆ ಬಂದು ದೀಪ ಹಚ್ಚಲಿ ಅಂತ ಮಾಜಿ ಸಚಿವ ಸುಧಾಕರ್ ಸವಾಲು ಹಾಕಿದರು. ಈ ಸವಾಲನ್ನ ನಾನು ಸ್ವೀಕರಿಸುತ್ತೇನೆ. ಆದ್ರೆ ನನ್ನದೊಂದು ಸವಾಲು ಸಹ ಇದೆ. ಆ ಸವಾಲನ್ನ ಕೂಡ ಸುಧಾಕರ್ ಸ್ವೀಕಾರ ಮಾಡುವಂತೆ ಪ್ರದೀಪ್ ಈಶ್ವರ್ ಮರು ಸವಾಲು ಹಾಕಿದ್ದಾರೆ.
ಚಿಕ್ಕಬಳ್ಳಾಪರ ನಗರದ ಖಾಸಗಿ ಹೋಟೆಲ್‍ನಲ್ಲಿ ಪ್ರದೀಪ್ ಈಶ್ವರ್ ಎಲ್‍ಎ.ಕಾಂ ವೆಬ್ ಸೈಟ್ ಲಾಂಚ್ ಮಾಡಿ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ ಅಂತ ದೀಪ ಹಚ್ಚುವಂತೆ ಸವಾಲು ಹಾಕಿದ್ದಾರೆ. ಅವರು ದೀಪ ಹಚ್ಚೋದಾದರೆ ನಾನು ಸಹ ದೀಪ ಹಚ್ಚುತ್ತೇನೆ. ದೀಪದಿಂದ ದೀಪವ ಹಚ್ಚಬೇಕು ಮಾನವ ಅಂತ ಸಾಂಗ್ ಹಾಕಿ ದೀಪ ಹಚ್ಚೋಣ ಎಂದರು. ಇದನ್ನೂ ಓದಿ: ಅನರ್ಹತೆ ಅಸ್ತ್ರ- ಶಿಂಧೆ, ಠಾಕ್ರೆ ಬಣದ ಶಾಸಕರಿಗೆ ಸ್ಪೀಕರ್ ನೋಟೀಸ್
ಸುಧಾಕರ್ ಪ್ರಾಮಾಣಿಕರಾಗಿದ್ರೆ ಕೋವಿಡ್ ನಲ್ಲಿ ಅವ್ಯವಹಾರ ಆಗಿಲ್ಲ ಅಂತ ದೀಪ ಹಚ್ಚಲಿ. ಆಗ ನಾನು ಅವ್ಯವಹಾರದ ದಾಖಲೆಗಳನ್ನ ದೇವಾಲಯದ ಹೊರಗೆ ಬಂದು ಬಿಡುಗಡೆ ಮಾಡ್ತೇನೆ. ನಮ್ಮ ಸರ್ಕಾರ ಶೀಘ್ರದಲ್ಲೇ ಕೋವಿಡ್ ಸಮಯದ ಹಗರಣಗಳ ಬಗ್ಗೆ ಎಸ್‍ಐಟಿ ತನಿಖೆಗೆ ಕೊಡಲಾಗುತ್ತಿದೆ. ನಿವೇಶನ ಪತ್ರ ಹಂಚಿಕೆ ವಿಚಾರದಲ್ಲೂ ಸಹ ಎಸ್ ಐ ಟಿ ತನಿಖೆಗೆ ಆದೇಶ ಮಾಡುತ್ತೇವೆ ಅಂತ ಹೇಳಿದರು.
Web Stories