ಚಿಕ್ಕಬಳ್ಳಾಪುರ: ಇಂದು ಬೆಳಗ್ಗೆ 9 ಗಂಟೆಗೆ ಮದ್ಯದಂಗಡಿ ಬಾಗಿಲು ತೆರೆಯುತ್ತೆ ಅಂತ ಕಾಯುತ್ತಿದ್ದ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಗರದ ಮದ್ಯಪಾನ ಪ್ರಿಯರಿಗೆ ನಿರಾಸೆಯಾಗಿದೆ.
ಚಿಕ್ಕಬಳ್ಳಾಪುರ ನಗರದ 10 ಹಾಗೂ ಗೌರಿಬಿದನೂರು ನಗರದ 6 ಮದ್ಯದಂಗಡಿಗಳನ್ನ ಸದ್ಯಕ್ಕೆ ತೆರೆಯದಂತೆ ಅಬಕಾರಿ ಇಲಾಖೆ ಮೌಖಿಕ ಆದೇಶ ನೀಡಿದೆ. ಅಂದಹಾಗೆ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಗರದಲ್ಲಿ ಕೊರೊನಾ ವೈರಸ್ ಕಂಟೈನ್‍ಮೆಂಟ್ ಝೋನ್‍ಗಳಿದ್ದು, ಈ ಎರಡು ನಗರಗಳು ಸಹ ಬಫರ್ ಝೋನ್ ವ್ಯಾಪ್ತಿಯಲ್ಲಿವೆ. ಹೀಗಾಗಿ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಗರದಲ್ಲಿ ಮದ್ಯದಂಗಡಿಗಳನ್ನ ತೆರೆಯುವುದಾ ಅಥವಾ ಬೇಡವಾ ಎಂಬುದನ್ನ ನಿರ್ಧರಿಸುವುದಾಗಿ ಅಬಕಾರಿ ಡಿ ಸಿ ನರೇಂದ್ರ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
Advertisement
Advertisement
ಇತ್ತ ಇಂದಿನಿಂದ ಮದ್ಯದಂಗಡಿ ಆರಂಭ ಮಾಡಬಹುದು ಅಂತ ತಡೆಗೋಡೆಗಳನ್ನ ಕಟ್ಟಿ, ಬಾಕ್ಸ್ ಹಾಕಿ ಸಕಲ ಸಿದ್ಧತೆಗಳನ್ನ ಮದ್ಯದಂಗಡಿ ಮಾಲೀಕರು ಮಾಡಿಕೊಂಡಿದ್ದರು. ಆದ್ರೆ ಸದ್ಯ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿದ ಹಿನ್ನೆಲೆ ಮದ್ಯ ಸಿಗುತ್ತೆ ಅಂತ ಬಂದಿದ್ದ ಮದ್ಯಪ್ರಿಯರು ಗ್ರಾಮೀಣ ಭಾಗಗಳ ಮದ್ಯದಂಗಡಿಗಳತ್ತ ಮುಖ ಮಾಡಿದ್ದಾರೆ.