ಚಿಕ್ಕಬಳ್ಳಾಪುರ: ಉಕ್ರೇನ್ ಹಾಗೂ ರಷ್ಯಾ ಯುದ್ದ ಸಂಘರ್ಷ ದಿಂದ ಉಕ್ರೇನ್‍ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ 7 ಮಂದಿ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಪೋಷಕರಲ್ಲಿ ಆತಂಕ ಮನೆ ಮಾಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ತನ್ಮಯ್ ಗೌತಮ್ ಸಾಯಿಕೃಷ್ಣ, ನಯನ್ ರೆಡ್ಡಿ, ಹಾಗೂ ಪ್ರಶಾಂತ್ ನಾಯ್ಡು, ಬಾಗೇಪಲ್ಲಿ ತಾಲೂಕು ಚೇಳೂರು ಮೂಲದ ನೂರ್ ಅಹಮದ್ ಅವರ ಪುತ್ರಿ ಐಮನ್ ಬುಶ್ರಾ, ಗುಡಿಬಂಡೆ ತಾಲಕೂಕು ವರಲಕೊಂಡ ಲಕ್ಷಿಸಾಗರ ಗ್ರಾಮದ ಬಾಲಕೃಷ್ಣ ಅವರ ಪುತ್ರ ನವನೀತ್ ಹಾಗೂ ಚಿಕ್ಕಬಳ್ಳಾಪುರ ನಗರ ಡಿಎಆರ್ ಎಎಸ್‍ಐ ವಿಶ್ವನಾಥ್ ಅವರ ಪುತ್ರ ತೇಜ್ ಕುಮಾರ್ ಉಕ್ರೇನ್‍ನಲ್ಲಿ ಸಿಲುಕಿರುವರಾಗಿದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವೆಬ್ ಪೋರ್ಟಲ್ ಪ್ರಾರಂಭ
Advertisement
Advertisement
ವಿದ್ಯಾರ್ಥಿಗಳು ಸದ್ಯ ಕ್ಷೇಮವಾಗಿದ್ದು, ತಾವು ಇರುವ ಜಾಗದಲ್ಲಿ ಯಾವುದೇ ಯುದ್ದ ಭೀತಿ ಇಲ್ಲ. ಆದರೂ ಮುಂದೆ ಏನಾಗುತ್ತೋ ಅನ್ನೋ ಆತಂಕ ಅಂತೂ ಇದೆ ಅಂತ ತಿಳಿಸಿದ್ದಾರೆ. ಉಕ್ರೇನ್‍ನಲ್ಲಿ ತುರ್ತು ಪರಿಸ್ಥಿತಿ ಹಿನ್ನಲೆ ಎಟಿಎಂ ದಿನಸಿ ಅಂಗಡಿಗಳ ಬಳಿ ಕ್ಯೂ ಇದೆ. ಹೊರಗಡೆ ಹೋಗುವಂತಿಲ್ಲ ದೂರದಲ್ಲಿ ಸ್ಫೋಟದ ಸದ್ದು ಕೇಳಿಬರುತ್ತಿವೆ ಎಂದು ಅಂತ ಪೋಷಕರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.