Connect with us

Chikkaballapur

ಪ್ರತಿದಿನ ಊಟದಲ್ಲಿ ಸ್ವಲ್ಪ ಸ್ವಲ್ಪ ವಿಷ: ಪ್ರಿಯಕರ ಜೊತೆ ಸೇರಿ ಗಂಡನ ಕೊಲೆಗೆ ಸ್ಕೆಚ್

Published

on

ಚಿಕ್ಕಬಳ್ಳಾಪುರ: ಪ್ರಿಯಕರನ ಜೊತೆ ಸೇರಿಕೊಂಡ ಗೃಹಿಣಿಯೊರ್ವಳು, ಸ್ವತಃ ಗಂಡನಿಗೆ ವಿಷ ಪ್ರಾಶನ ಮಾಡಿ ಕೊಲೆ ಮಾಡಲು ಯತ್ನಿಸಿದ್ದು, ಈ ಸಂಚು ಮೊಬೈಲ್ ಆಡಿಯೋ ರೆಕಾರ್ಡ್ ಮೂಲಕ ಬಯಲಾಗಿದೆ.

ಪತ್ನಿ ಕೃಷ್ಣಮ್ಮ  ಪತಿ ನರಸಿಂಹಪ್ಪ ಅವರ ಹತ್ಯೆಗೆ ಸಂಚು ರೂಪಿಸಿದ್ದು, ಪೊಲೀಸರು ಈಗ ಆಕೆಯನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕು ಚಿಕ್ಕಮುನಿಮಂಗಲ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮದ ಆನಂದರೆಡ್ಡಿ ಎನ್ನುವ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು ಗಂಡನನ್ನು ಮುಗಿಸಲು ಕೃಷ್ಣಮ್ಮಸಂಚು ರೂಪಿಸಿದ್ದಳು. ಒಂದೇ ಬಾರಿಗೆ ವಿಷ ಹಾಕಿದ್ರೆ ಗೊತ್ತಾಗುತ್ತೆ ಎನ್ನುವ ಕಾರಣ ಪ್ರತಿದಿನ ಊಟದಲ್ಲಿ ಸ್ವಲ್ಪ ಸ್ವಲ್ಪ ವಿಷ ಪ್ರಾಶನ ಮಾಡುತ್ತಿದ್ದಳು. ಆರೋಗ್ಯದಲ್ಲಿ ಏರು ಪೇರಾಗಿ ಗಂಡ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಇದನ್ನರಿತ ಆನಂದ ರೆಡ್ಡಿ ಕೃಷ್ಣಮ್ಮ ಜೊತೆ ವಿಚಾರಿಸುವ ಆಡಿಯೋ ಈಗ ಪೊಲೀಸರ ಕೈ ಸೇರಿದ್ದು, ಪೊಲೀಸರು ಕೃಷ್ಣಮ್ಮನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರೆ, ಪ್ರಿಯಕರ ಆನಂದ ರೆಡ್ಡಿ ನಾಪತ್ತೆಯಾಗಿದ್ದಾನೆ. ಮತ್ತೊಂದೆಡೆ ಕೃಷ್ಣಮ್ಮ ಪತಿ ನರಸಿಂಹಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪತ್ತೆಯಾಗಿದ್ದು ಹೇಗೆ: ಆನಂದ್ ರೆಡ್ಡಿ ಕೃಷ್ಣಮ್ಮನಿಗೆ ಮೊಬೈಲ್ ಉಡುಗೊರೆಯಾಗಿ ನೀಡಿದ್ದ. ಈ ಮೊಬೈಲನ್ನು ಬಳಸುವುದನ್ನು ನೋಡಿದ ಪತಿ ಎಲ್ಲಿಂದ ಬಂತು, ಯಾರು ಕೊಟ್ಟಿದ್ದು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೃಷ್ಣಮ್ಮ ರಸ್ತೆಯಲ್ಲಿ ಸಿಕ್ಕಿತ್ತು, ಈಗ ಬಳಸುತ್ತಿದ್ದೇನೆ ಎಂದು ಹೇಳಿದ್ದಾಳೆ. ಈ ವಿಚಾರದ ಬಗ್ಗೆ ಇಬ್ಬರ ನಡುವೆ ಗಲಾಟೆ ನಡೆದು ಕೊನೆಗೆ ನರಸಿಂಹಪ್ಪ ಆ ಮೊಬೈಲ್ ತನ್ನ ಜೊತೆ ಇಟ್ಟುಕೊಂಡಿದ್ದಾರೆ. ಇದಾಗಿ ಕೆಲ ದಿನಗಳ ಬಳಿಕ ಸಂಬಂಧಿಯೊಬ್ಬ ಮನೆಗೆ ಬಂದಾಗ ಆತನ ಮೂಲಕ ಸಿಮ್ ತೆಗೆಯುತ್ತಾಳೆ. ಬಳಿಕ ಆ ಸಿಮ್ ನಲ್ಲಿ ಕರೆನ್ಸಿ ಇದೆ ಎಂದು ಹೇಳಿ ಸಂಬಂಧಿ ಫೋನ್ ಮೂಲಕ ಆನಂದ್‍ಗೆ ಕರೆ ಮಾಡುತ್ತಾಳೆ. ಮೂರು ಬಾರಿ ಆಕೆ ಕರೆ ಮಾಡಿದ್ದಾಳೆ. ಸಂಬಂಧಿ ತನ್ನ ಮೊಬೈಲ್ ನಲ್ಲಿ ಆಟೋಮ್ಯಾಟಿಕ್ ಆಗಿ ಕರೆಗಳನ್ನು ರೆಕಾರ್ಡ್ ಮಾಡುವಂತೆ ಸೆಟ್ ಮಾಡಿಕೊಂಡಿದ್ದ. ಇದಾದ ಬಳಿಕ ಸಂಬಂಧಿ ಕೃಷ್ಣಮ್ಮ ಯಾರ ಜೊತೆ ಏನು ಮಾತನಾಡಿದ್ದಾಳೆ ಎನ್ನುವುದನ್ನು ತಿಳಿಯಲು ಆಡಿಯೋ ಫೈಲ್‍ಗಳನ್ನು ಓಪನ್ ಮಾಡಿದಾಗ ಈಕೆಯ ಕೃತ್ಯ ಗೊತ್ತಾಗಿದೆ. ನಂತರ ಈ ಆಡಿಯೋ ಫೈಲನ್ನು ಸಂಬಧಿ ನರಸಿಂಹಪ್ಪಗೆ ಕೇಳಿಸಿದ್ದಾನೆ.

ಇಬ್ಬರ ಮೊಬೈಲ್ ಸಂಭಾಷಣೆಯಲ್ಲಿ ಏನಿದೆ?
ಆನಂದ್ ರೆಡ್ಡಿ: ಸರಿ ಈಗ ಏನು ಮಾಡೋದು?
ಕೃಷ್ಣಮ್ಮ: ಇದನ್ನೇ ಬಳಸೋಣ.
ಆನಂದ್ ರೆಡ್ಡಿ: ಸರಿ ಅದನ್ನೇ ಬಳಸ್ತೀಯಾ? ಆದ್ರೆ 10 ದಿನಗಳಿಂದ ಬಳಸ್ತೀದ್ದೀಯಾ ಏನು ಆಗಲಿಲ್ವಲ್ಲ
ಕೃಷ್ಣಮ್ಮ: 10 ದಿನಗಳಿಂದ ಎಲ್ಲಿ? ಡೈಲಿ ಇಲ್ಲ, ಒಂದು ದಿನ, ಎರಡು ದಿನಕ್ಕೆ ಒಂದು ಸಾರಿ
ಅನಂದ್ ರೆಡ್ಡಿ: ಈಗ ಸಿರೀಯಸ್ ಆಗೋದಾದ್ರೆ ಡೈಲಿ ಬಳಸು.

ಕೃಷ್ಣಮ್ಮ: ಡೈಲಿ ಬಳಸಬಹುದು, ಮಕ್ಕಳಿರ್ತಾರೆ, ಒಂದು ಸಾರಿ ಮನೆಯಲ್ಲಿ ಊಟ ಮಾಡ್ತಾನೆ, ಮತ್ತೊಂದು ಸಾರಿ ಅಚೆ ಊಟ ಮಾಡ್ತಾನೆ. ಆಚೆ ತಿಂದಾಗ ಏನೂ ಆಗಲ್ಲ. ಮನೆಯಲ್ಲಿ ತಿಂದಾಗ ಆಗುತ್ತೆ. ಆದರಿಂದ ಒಂದು ಸಾರಿ ಬಿಟ್ಟು ಮತ್ತೊಂದು ಸಾರಿ ಹಾಕಿದ್ರೇ ಸರಿ ಹೋಗುತ್ತೆ. ಅಲ್ಲಾ ಡೈಲಿ ಹಾಕಿದ್ರೇ ಡೌಟ್ ಬರಲ್ವಾ?
ಅನಂದ್ ರೆಡ್ಡಿ: ಏನ್ ಡೌಟ್ ಬರುತ್ತೆ?
ಕೃಷ್ಣಮ್ಮ: ಅಲ್ಲಾ ಮನೆಯಲ್ಲಿ ತಿಂದಾಗ ವಾಮಿಟ್ ಆಗುತ್ತಲ್ಲ. ಆಚೆ ತಿಂದಾಗ ಆಗಲ್ವಲ್ಲಾ
ಆನಂದ್ ರೆಡ್ಡಿ: ತಿಂತಾನೇ ವಾಮಿಟ್ ಆಗುತ್ತಾ?
ಕೃಷ್ಣಮ್ಮ : ತಿಂದ ಹತ್ತು ಹದಿನೈದು ನಿಮಿಷ ಆದ ಮೇಲೆ ಆಗುತ್ತೆ. ಅದು ಹಾಕಿದ ಹಾಗೆ ಜಾಸ್ತಿ ಹಾಕಿದ್ರೆ 10 ನಿಮಿಷ, ಕಡಿಮೆ ಹಾಕಿದ್ರೆ 15 ನಿಮಿಷ
ಅನಂದ್ ರೆಡ್ಡಿ : ಹುಂ ಅದು ವಾಂತಿ ಆಗದೆ ಇದ್ದ ಹಾಗೆ ನೋಡಿಕೊಳ್ಳಲಾಗುವುದಿಲ್ಲವೇ?ಸರಿ ಈಗ ಏನು ಮಾಡೋದು?
ಕೃಷ್ಣಮ್ಮ: ಹೇಗೆ? ಏನ್ ಮಾಡಿದ್ರು ಆಗುತ್ತೆ.

ಅನಂದ್ ರೆಡ್ಡಿ: ಹಾ..
ಕೃಷ್ಣಮ್ಮ: ಮೊನ್ನೆನೇ ಹೇಳ್ತಿದ್ದ ಮೊದಲು ವಾಂತಿ, ಅಮೇಲೆ ಜ್ವರ, ತಲೆ ನೋವು ಅಂತ ವರ್ಷದಿಂದ ಹೀಗೆ ಆಗ್ತಿದೆ ಎಲ್ಲೆಲ್ಲೋ ತೋರಿಸಿದೆ ಅಂತ ಅಂಜಪ್ಪಗೆ ಹೇಳ್ತಿದ್ದ.
ಅನಂದರೆಡ್ಡಿ: ಈಗ ಜ್ವರ ತಲೆ ನೋವು ಏನೂ ಇಲ್ವಾ?
ಕೃಷ್ಣಮ್ಮ: ತಲೆನೋವು ಅಂತೆ ಹಿಂದೆ ತಲೆ ನೋವು ಅಂತೆ ಜ್ವರ ಇಲ್ವೇನೋ.
ಅನಂದರೆಡ್ಡಿ: ಅದು ಚೆನ್ನಾಗಿ ಮೈಗೆ ಹತ್ತಿದಾಗ ತಲೆನೋವು ಜ್ವರ ಬರೋದು. ಚೆನ್ನಾಗಿ ಮೈಗೆ ಇಳಿಲಿ.

ಕೃಷ್ಣಮ್ಮ: ಹುಂ..
ಅನಂದರೆಡ್ಡಿ: ಯಾರದು
ಕೃಷ್ಣಮ್ಮ: ನನ್ನ ಮಗಳು.
ಅನಂದರೆಡ್ಡಿ: ಹುಂ ನನಗೆ ಬಹಳ ಬೇಜರಾಗಿ ಹೋಗಿದೆ. ಪ್ರಮಾಣಿಕವಾಗಿ ಹೇಳ್ತಿದ್ದೇನೆ. ತಡೆದುಕೊಳ್ಳಲು ಆಗುತ್ತಿಲ್ಲ.
ಕೃಷ್ಣಮ್ಮ: ಹಾ..
ಅನಂದರೆಡ್ಡಿ: ಅವನ ನೋಡಿದ್ರೆ ನಂಗೆ ಹಲ್ಲು ಕಚ್ಚಬೇಕು ಅನಿಸುತ್ತೆ ಕೋಪ ಬರುತ್ತೆ. ಏನಾದ್ರೂ ಮಾಡಿಬೇಗ ಮುಗಿಸಿಬಿಟ್ರೇ? ನನಗೆ ಓಕೆ. ಇಲ್ಲ ಅಂದ್ರೆ ನನಗೆ ಬಹಳ ಕಷ್ಟ ಆಗುತ್ತೆ. ಏನ್ ಮಾಡ್ತೀಯಾ ಈಗ
ಕೃಷ್ಣಮ್ಮ: ಹು ಹಂಗೆ ಮಾಡ್ತೀನಿ.

ಅನಂದರೆಡ್ಡಿ: ಹಾ
ಕೃಷ್ಣಮ್ಮ: ಹಾಗೆ ಮಾಡೋಣ ಬಿಡು.
ಅನಂದರೆಡ್ಡಿ: ಹುಂ ನಂಗೆ ಜಾಸ್ತಿ ಭಾದೆ ಆಗೋಗಿದೆ.
ಕೃಷ್ಣಮ್ಮ: ಹಲೋ ಏನು ಕೇಳಿಸ್ತಿಲ್ಲ.
ಅನಂದರೆಡ್ಡಿ: ಮೂರು ತಿಂಗಳು ಆಯ್ತೇನೇ? ಅವನ ಮುಖ ನೋಡಿದ್ರೇ ಆಗಲ್ಲ. ಏನೋ ಕಷ್ಟ ನಂಗೆ ಈ ಟೆನ್ಷನ್
ಕೃಷ್ಣಮ್ಮ: ಏನೂ ಟೆನ್ಷನ್ ತಗೋಬೇಡ ಆರಾಮಾಗಿರು.
ಅನಂದ್ ರೆಡ್ಡಿ: ಏನೂ ಟೆನ್ಷನ್ ಇಲ್ಲ. ವಯಸ್ಸಲ್ಲಿ ಏನೂ ಮಾಡಿದರ ವಯಸ್ಸಾದ ಮೇಲೆ ಏನು ಮಾಡೋದು ಅದೇ ಬಾಧೆ ನಂಗೆ.
ಕೃಷ್ಣಮ್ಮ: ಏನ್ ಮಾಡ್ತೀಯಾ? ಮೂರು ಸಲ ಮುಂದೆ ಬಂದು ಹೋಯ್ತು.

 

 

Click to comment

Leave a Reply

Your email address will not be published. Required fields are marked *