ಲಕ್ನೋ: ರಕ್ಷಾ ಬಂಧನದ ದಿನದಂದು ಉತ್ತರಪ್ರದೇಶದ ಮಹಿಳೆಯರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಂಪರ್ ಆಫರ್ ಒಂದನ್ನು ನೀಡಿದ್ದಾರೆ. ಹೌದು. ಕಳೆದ ವರ್ಷದಂದತೆ ಈ ವರ್ಷವೂ ಮಹಿಳೆಯರಿಗೆ ಮುಖ್ಯಮಂತ್ರಿ ಭರ್ಜರಿ ಕೊಡುಗೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಆಗಸ್ಟ್ 22ರಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತಿದೆ. ಈ ದಿನ ರಾಜ್ಯ ಸಾರಿಗೆ ಸಂಸ್ಥೆಯ ಯಾವುದೇ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿಯೇ ಪ್ರಯಾಣ ಮಾಡುವ ಆಫರ್ ನೀಡಲಾಗಿದೆ.
Advertisement
Advertisement
ಈ ವಿಶೇಷ ಆಫರ್ ಆಗಸ್ಟ್ 21ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದ್ದು, 22ರ ಮಧ್ಯರಾತ್ರಿಯವರೆಗೆ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಉಚಿತ ಪ್ರಯಾಣದ ವೇಳೆ ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಸೂಕ್ತ ಭದ್ರತೆಯನ್ನು ಒದಗಿಸಲಾಗುತ್ತದೆ. ಇದನ್ನೂ ಓದಿ: 2 ಕೋಟಿ ವೆಚ್ಚದಲ್ಲಿ ಜಗನ್ ಮೋಹನ ರೆಡ್ಡಿ ದೇವಾಲಯ ನಿರ್ಮಿಸಿದ ಶಾಸಕ
Advertisement
ಮಹಾಮಾರಿ ಕೊರೊನಾ ವೈರಸ್ ದೇಶಕ್ಕೆ ವಕ್ಕರಿಸಿದ ಬಳಿಕ ದೇಶದಲ್ಲಿ ಸಭೆ ಸಮಾರಂಭಗಳಿಗೆ ನಿರ್ಬಂಧಗಳನ್ನು ಹಾಕಲಾಗಿತ್ತು. ಸದ್ಯ ಕೊರೊನಾ 3ನೇ ಅಲೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಸಂಭ್ರಮಾಚಾರಣೆ ಮಾಡುವ ಬದಲು ಮನೆಯಲ್ಲಿಯೇ ರಕ್ಷಾಬಂಧನ ಆಚರಣೆ ಮಾಡುವಂತೆ ಕರೆ ನೀಡಲಾಗಿದೆ.