ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸದ್ಯಕ್ಕೆ ರಾಜಕೀಯವಾಗಿ ಸೇಫ್. ಆದ್ರೆ ಮುಂದೆನು? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯಕ್ಕೆ ಕಾಂಗ್ರೆಸ್ ಹೈಕಮಾಂಡ್ (Congress High Command) ಸಿಎಂ ಸಿದ್ದರಾಮಯ್ಯ ಪರ ನಿಂತಿರುವ ಬಗ್ಗೆ ಹಲವು ರಾಜಕೀಯ ಲೆಕ್ಕಚಾರಗಳು ಇವೆ ಎನ್ನಲಾಗಿದೆ.
ಕುರುಬ, ಹಿಂದುಳಿದ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ (Congress) ಕಡೇ ತನಕ ಸಿದ್ದರಾಮಯ್ಯ ಪರ ನಿಲ್ಲಲು ಸಂದೇಶ ರವಾನಿಸಿದೆ. ಕೋರ್ಟ್ ಮುಂದೆ ಕಾನೂನು ಹೋರಾಟ ಕ್ಲಿಯರ್ ಆದ ಬಳಿಕವೇ ಬೇರೆ ತೀರ್ಮಾನ ಮಾಡೋಣ ಎಂಬುದು ಎಐಸಿಸಿ ನಾಯಕರ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂಬುದು ಮೂಲಗಳ ಮಾಹಿತಿ. ಇದನ್ನೂ ಓದಿ: TB Dam | ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ – ತಾಂತ್ರಿಕ ತಂಡಕ್ಕೆ 2 ಲಕ್ಷ ಬಹುಮಾನ
Advertisement
Advertisement
ರಾಜಕೀಯ ಹೋರಾಟದಲ್ಲಿ ಹಿಂದೆ ಸರಿಯಬಾರದು, ಸಿದ್ದರಾಮಯ್ಯ ಕೈ ಬಿಡಬಾರದು, ಹಿಂದುಳಿದ ವರ್ಗದ ನಾಯಕ, ಭವಿಷ್ಯದ ದೃಷ್ಟಿಯಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಕಡೇ ಹಂತದ ತನಕ ಕಾನೂನು ಹೋರಾಟ ನಡೆಯಲಿ… ಅಲ್ಲಿ ತನಕ ಸಿದ್ದರಾಮಯ್ಯ ಜೊತೆ ಇರಲೇಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಸಂದೇಶ ರವಾನಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಪಾಕ್, ಬಾಂಗ್ಲಾ, ಅಫ್ಘಾನಿಸ್ತಾನದ 188 ಹಿಂದೂ ನಿರಾಶ್ರಿತರಿಗೆ ಪೌರತ್ವ ಪ್ರಮಾಣಪತ್ರ ನೀಡಿದ ಅಮಿತ್ ಶಾ
Advertisement
ರಾಜಕೀಯ ಕಾರಣಗಳಿಗಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ (Prosecution) ಅನುಮತಿ ಕೊಟ್ಟಿರುವುದು ಸ್ಪಷ್ಟ. ಪಕ್ಷ, ಸರ್ಕಾರ ಎರಡನ್ನೂ ಇಕ್ಕಟಿಗೆ ಸಿಲುಕಿಸುವ ವಿರೋಧಿಗಳ ಯತ್ನಕ್ಕೆ ಜಯ ಸಿಗಬಾರದೆಂಬ ತಂತ್ರಗಾರಿಕೆ ಕಾಂಗ್ರೆಸ್ ಹೈಕಮಾಂಡ್‌ನದ್ದು. ಹಾಗಾಗಿ ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಸೇಫ್. ರಾಜಕೀಯ ಬಲ ಕೊಟ್ಟಿರುವ ಹೈಕಮಾಂಡ್, ಮುಂದೆಯೂ ಹೀಗೆ ಇರುತ್ತಾ? ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ & ಹತ್ಯೆ ಕೇಸ್; ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ