Districts
ಫಲಾನುಭವಿಯೊಬ್ಬರ ಮೀಸೆ ತಿರುವಿ ಸಂತೋಷ ಪಟ್ಟ ಸಿಎಂ
ಮೈಸೂರು: ಸಿಎಂ ಸಿದ್ದಾಮಯ್ಯ ಫಲಾನುಭವಿಯೊಬ್ಬರ ಮೀಸೆಯನ್ನು ತಿರುವಿ ಸಂತೋಷಪಟ್ಟಿದ್ದಾರೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆದಿವಾಸಿಗಳಿಗೆ ಸವಲತ್ತು ವಿತರಣಾ ಬೃಹತ್ ಸಮಾವೇಶ ಬುಧವಾರ ನಡೆಯಿತು.
ಮೈಸೂರಿನ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ನಡೆದ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಸೋಲಿಗ, ಜೇನುಕುರುಬ, ಮಲೆಕುಡಿಯ, ಕೊರಗ, ಸಿದ್ಧಿ ಸೇರಿದಂತೆ 13 ಆದಿವಾಸಿ ಸಮುದಾಯದ ಜನರಿಗೆ ಪೌಷ್ಠಿಕ ಆಹಾರ ಸೇರಿದಂತೆ ಮೊದಲಾದ ಸವಲತ್ತುಗಳನ್ನು ವಿತರಿಸಿದರು.
ಈ ವೇಳೆ ಹಕ್ಕು ಪತ್ರ ಪಡೆಯಲು ಬಂದಿದ್ದ ಫಲಾನುಭವಿಯೊಬ್ಬರ ಮೀಸೆಯನ್ನು ಸಿಎಂ ತಿರುವಿದರು. ಸಚಿವ ಹೆಚ್.ಆಂಜನೇಯ, ಡಾ.ಹೆಚ್.ಸಿ.ಮಹದೇವಪ್ಪ, ರಮಾನಾಥ ರೈ ಹಾಗೂ ತನ್ವೀರ್ ಸೇಠ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
