– ಟ್ರಂಪ್ ಮೊದಲು ಹೇಳಿದ್ದೇ ಕರೆಕ್ಟ್ ಅನ್ಸುತ್ತೆ
ಕೊಪ್ಪಳ: ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ, ಅಗತ್ಯವಿದ್ದರೆ ಮಾತ್ರ ಯುದ್ಧ ಮಾಡಿ ಎಂದಿದ್ದೆ. ಅದನ್ನು ಮಾಧ್ಯಮದಲ್ಲಿ ಕಟ್ ಮಾಡಿ ತೋರಿಸಿ ಬಿಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಕೊಪ್ಪಳದಲ್ಲಿ (Koppal) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಉಗ್ರರಿಗೆ ನೆಲೆ ಕೊಟ್ಟಿದ್ದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಅವಕಾಶ ಸಿಕ್ಕಿತ್ತು. ನಮ್ಮ ಸಾರ್ವಭೌಮತ್ವ ಉಳಿಸಲು ಯುದ್ಧ ಮಾಡಲೇಬೇಕಾದ ಅನಿವಾರ್ಯ ಇದ್ದರೆ, ಮಾಡಲೇಬೇಕು. ನಮ್ಮ ಸೈನ್ಯ ಪಾಕಿಸ್ತಾನದ ಮೇಲೆ ದಾಳಿ ಮಾಡಿದಾಗ ಇಡಿ ದೇಶ ಒಗ್ಗಟ್ಟಾಗುವ ಕೆಲಸ ಮಾಡುತ್ತದೆ ಎಂದಿದ್ದೆ, ಅದನ್ನೆಲ್ಲ ಕತ್ತರಿಸಿ ತೋರಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಜೊತೆ ಯುದ್ಧ ಬೇಡವೇ ಬೇಡ ಅಂತಾ ಹೇಳಿಲ್ಲ: ಉಲ್ಟಾ ಹೊಡೆದ ಸಿಎಂ
ಆಪರೇಷನ್ ಸಿಂಧೂರ (Operation Sindoor ) ವಿಚಾರದಲ್ಲಿ ಕಾಂಗ್ರೆಸ್ ಶಾಸಕರ ವಿವಾದಾತ್ಮಕ ಹೇಳಿಕೆ ವಿಚಾರವಾಗಿ, ಕಾಂಗ್ರೆಸ್, ಬಿಜೆಪಿ ಶಾಸಕರು, ಸೈನಿಕ ಅಧಿಕಾರಿಗಳು, ಪ್ರಧಾನ ಮಂತ್ರಿಗಳು ಹಾಗೂ ವಿದೇಶಾಂಗ ಸಚಿವರು ಅವರವರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದ್ರೆ ಟ್ರಂಪ್ ಅವರು ಮೊದಲು ಹೇಳಿದ್ದು ಬೇರೆ, ಈಗ ಮತ್ತೆ ಬೇರೆ ಹೇಳಿಕೆ ಕೊಡುತ್ತಿದ್ದಾರೆ. ಯಾವ ಹೇಳಿಕೆ ಅಧಿಕೃತ ಎಂದು ಗೊತ್ತಾಗ್ತಾ ಇಲ್ಲ. ನನ್ನ ಪ್ರಕಾರ ಟ್ರಂಪ್, ಮೊದಲು ಹೇಳಿರೋದು ಸರಿಯಾಗಿದೆ ಎಂದು ಅನಿಸುತ್ತದೆ ಎಂದಿದ್ದಾರೆ.
ಈ ಮೊದಲು ಸಹ ಸಿದ್ದರಾಮಯ್ಯ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಈ ವೇಳೆ, ಪಹಲ್ಗಾಮ್‌ನಲ್ಲಿ 26 ಜನ ಮೃತಪಟ್ಟಿದ್ದರು. ಪುಲ್ವಾಮಾ ದಾಳಿಯಲ್ಲಿ 40 ಜನ ಸೈನಿಕರು ಹುತಾತ್ಮರಾಗಿದ್ದರು. ಇದು ಕೇಂದ್ರ ಸರ್ಕಾರದ ಇಂಟೆಲಿಜೆನ್ಸ್ ವೈಫಲ್ಯ. ಸೆಕ್ಯುರಿಟಿಯನ್ನು ಸರಿಯಾದ ರೀತಿಯಲ್ಲಿ ಕೊಟ್ಟಿರಲಿಲ್ಲ. ಯುದ್ಧನೇ ಪರಿಹಾರ ಅಲ್ಲ. ಕಾಶ್ಮೀರಕ್ಕೆ ಸಾಕಷ್ಟು ಜನ ಪ್ರವಾಸಕ್ಕೆ ಹೋಗುತ್ತಾರೆ. ಅವರಿಗೆ ಭದ್ರತೆ ಕೊಡಬೇಕಲ್ವಾ? ಭದ್ರತೆ ಕೊಡಬೇಕಾದ್ದು ಕೇಂದ್ರ ಸರ್ಕಾರದ ಜವಾಬ್ದಾರಿ ಅಲ್ವ? ಹೀಗಾಗಿ, ಭದ್ರತೆಯಲ್ಲಿ ವೈಫಲ್ಯ ಇದೆ ಅಂತಾ ಹೇಳಿದ್ದೀನಿ ಎಂದಿದ್ದರು.
ಪಾಕ್ ಜೊತೆ ಯುದ್ಧ ಅನಿವಾರ್ಯತೆ ಇಲ್ಲ ಎಂಬ ಸಿಎಂ ಹೇಳಿಕೆ ಪಾಕ್ ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು. ಇದರ ಬೆನ್ನಲ್ಲೇ ಸಿಎಂ ಹೇಳಿಕೆ ವಿರುದ್ಧ ವಿಪಕ್ಷಗಳು ಟೀಕಾಪ್ರಹಾರ ನಡೆಸಿದ್ದವು. ‘ಪಾಕಿಸ್ತಾನ ರತ್ನ ಸಿದ್ದರಾಮಯ್ಯ’ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಜಮ್ಮು & ಕಾಶ್ಮೀರದಲ್ಲಿ 2 ಎನ್‌ಕೌಂಟರ್ – ಭಾರತೀಯ ಸೇನೆ 6 ಉಗ್ರರನ್ನು ಹೊಡೆದುರುಳಿಸಿದ್ದು ಹೇಗೆ?