ಭಾನುವಾರ ರಜಾ ದಿನವಾದ್ದರಿಂದ ಎಲ್ರೂ ಮನೆಯಲ್ಲಿರುತ್ತಾರೆ. ಇಂದು ಮನೆಗೆ ಅತಿಥಿಗಳು ಕೂಡ ಬರಬಹುದು, ಆದರೆ ಪ್ರತಿಬಾರಿಯೂ ಚಿಕನ್ ಕಬಾಬ್, ಸಾಂಬಾರ್, ಗ್ರೇವಿ ಮಾಡುತ್ತಿರುತ್ತೀರಾ. ಹೀಗಾಗಿ ನಿಮಗಾಗಿ ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನ ಇಲ್ಲಿದೆ..
ಬೇಕಾಗುವ ಸಾಮಾಗ್ರಿಗಳು
1. ಬೋನ್ಲೆಸ್ ಚಿಕನ್ – 500 ಗ್ರಾಂ
2. ಈರುಳ್ಳಿ – 1 ಮೀಡಿಯಂ ಸೈಜ್
3. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
4. ಪೆಪ್ಪರ್ ಪೌಡರ್ – 1.5 ಚಮಚ
5. ಹಸಿ ಮೆಣಸಿನಕಾಯಿ – 2-3
6. ಕರಿಬೇವು – 10-15 ಎಲೆಗಳು
7. ಉಪ್ಪು – ರುಚಿಗೆ ತಕ್ಕಷ್ಟು
8. ನಿಂಬೆಹಣ್ಣು – ಅರ್ಧ ಹೋಳು
9. ಅರಿಶಿಣ – ಚಿಟಿಕೆ
10. ಬೆಳ್ಳುಳ್ಳಿ ಎಸಳು – 5-6
11. ಎಣ್ಣೆ – 3-4 ಚಮಚ
12. ಕೊತ್ತಂಬರಿ ಸೊಪ್ಪು – ಸಣ್ಣಗೆ ಹೆಚ್ಚಿದ್ದು ಸ್ವಲ್ಪ
Advertisement
Advertisement
ಮಾಡುವ ವಿಧಾನ:
ಪೆಪ್ಪರ್ ಚಿಕನ್ ಅನ್ನು 2 ರೀತಿಯಲ್ಲಿ ಮಾಡಬಹುದು. ನಿಮಗೆ ಯಾವುದು ಸುಲಭವೋ ಅದನ್ನು ಟ್ರೈ ಮಾಡಿ..
-ಮೊದಲ ವಿಧಾನ
* ಮೊದಲಿಗೆ ಒಂದು ಬೌಲ್ಗೆ ತೊಳೆದ ಚಿಕನ್ ಹಾಕಿ ಅದಕ್ಕೆ ಚಿಟಿಕೆ ಅರಿಶಿಣ, ಸ್ವಲ್ಪ ಕರಿಮೆಣಸಿನ ಪುಡಿ, ಉಪ್ಪು ಸೇರಿಸಿ ಕಲಸಿ ಅರ್ಧ ಮುಕ್ಕಾಲು ಗಂಟೆ ಮ್ಯಾರಿನೇಟ್ ಮಾಡಿ ನೆನಸಿಡಿ.
* ಒಂದು ಪ್ಯಾನ್ ಅನ್ನು ಬಿಸಿಗಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ ಎಸಳು, ಕರಿಬೇವು ಒಂದಾದ ಮೇಲೆ ಒಂದು ಹಾಕಿ ಫ್ರೈ ಮಾಡಿ.
* ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಳಿದ ಕರಿಮೆಣಸಿನ ಪುಡಿ ಹಾಕಿ ಫ್ರೈ ಮಾಡಿ.
* ಈಗ ಮ್ಯಾರಿನೇಟ್ ಮಾಡಿಟ್ಟಿದ್ದ ಚಿಕನ್ ಅನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಬೇಯಲು ಅಗತ್ಯವಿರುವಷ್ಟು ನೀರು ಸೇರಿಸಿ ಲಿಡ್ ಮುಚ್ಚಿ ಬೇಯಿಸಿ.
* ಕೊನೆಗೆ ಚಿಕನ್ ಎಲ್ಲಾ ಫ್ರೈ ಆದ ಮೇಲೆ ಕೆಳಗಿಳಿಸುವಾಗ ನಿಂಬೆ ಹಣ್ಣಿನ ರಸ ಹಿಂಡಿ. ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ.
* ನೀರು ಬಳಸುವಾಗ ಆದಷ್ಟು ಕಡಿಮೆ ಮಾಡಿ. ಇಲ್ಲವಾದಲ್ಲಿ ಚಿಕನ್ ಫ್ರೈ ಹೋಗಿ ಗ್ರೇವಿ ಆಗುತ್ತದೆ.
Advertisement
Advertisement
ಇನ್ನೊಂದು ವಿಧಾನ
* ಒಂದು ಪ್ಯಾನ್ ಅನ್ನು ಬಿಸಿಗಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ ಎಸಳು, ಕರಿಬೇವು ಒಂದಾದ ಮೇಲೆ ಒಂದು ಹಾಕಿ ಫ್ರೈ ಮಾಡಿ.
* ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಅರಿಶಿಣ ಹಾಕಿ ಫ್ರೈ ಮಾಡಿ.
* ಈಗ ತೊಳೆದ ಚಿಕನ್, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 2-3 ನಿಮಿಷ ಫ್ರೈ ಮಾಡಿ.
* ಈಗ ಬೇಯಲು ಅಗತ್ಯವಿರುವಷ್ಟು ನೀರು ಸೇರಿಸಿ ಲಿಡ್ ಮುಚ್ಚಿ ಬೇಯಿಸಿ.
* ಕೊನೆಗೆ ಚಿಕನ್ ಎಲ್ಲಾ ಫ್ರೈ ಆದ್ಮೇಲೆ ಕೆಳಗಿಳಿಸುವಾಗ ನಿಂಬೆ ಹಣ್ಣಿನ ರಸ ಹಿಂಡಿ, ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ.
* ನೀರು ಬಳಸುವಾಗ ಆದಷ್ಟು ಕಡಿಮೆ ಮಾಡಿ. ಇಲ್ಲವಾದಲ್ಲಿ ಚಿಕನ್ ಪೆಪ್ಪರ್ ಫ್ರೈ ಹೋಗಿ ಗ್ರೇವಿ ಆಗುತ್ತೆ.
* ಈ ರೆಸಿಪಿಯಲ್ಲಿ ಖಾರಕ್ಕೆ ಕರಿಮೆಣಸಿನ ಪುಡಿಯನ್ನೇ ಬಳಸುವುದರಿಂದ ಖಾರವನ್ನು ರುಚಿ ನೋಡಿಕೊಂಡು ಬಳಸಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv