ಚಿಕನ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದಕ್ಕೆ ರಜೆ ಇದ್ದಾಗೆಲ್ಲ ಮನೆಯಲ್ಲಿ ಚಿಕನ್ ಮಾಡಿ ಎಂದು ಹೇಳುತ್ತಾರೆ. ಆದರೆ ಯಾವಗಲೂ ಒಂದೇ ರೀತಿಯ ಟೇಸ್ಟ್ ಮಾಡಿದರೆ ಬೇಜಾರಾಗುತ್ತದೆ. ಹೀಗಾಗಿ ಮನೆಯಲ್ಲಿ ಕೂತು ಏನಪ್ಪಾ ಸ್ಟೆಷಲ್ ಮಾಡೋದು ಅನ್ನೋರಿಗೆ ಚಿಕನ್ ಪೆಪ್ಪರ್ ಡ್ರೈ ಅತ್ಯಂತ ಸರಳವಾಗಿ ಮಾಡುವಂತಹ ರೆಸಿಪಿಯಾಗಿದೆ. ಚಿಕನ್‍ನಲ್ಲೇ ವಿಭಿನ್ನವಾಗಿ ರೆಸಿಪಿ ಮಾಡುವ ಆಲೋಚನೆ ಮಾಡುವವರಿಗೆ ಚಿಕನ್ ಪೆಪ್ಪರ್ ಡ್ರೈ ತುಂಬಾ ಸುಲಭ ವಿಧಾನವಾಗಿದೆ. ನಿಮಗಾಗಿ ಚಿಕನ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇಲ್ಲಿದೆ…
Advertisement
ಬೇಕಾಗುವ ಸಾಮಾಗ್ರಿಗಳು:
1. ಚಿಕನ್- ಅರ್ಧ ಕೆ.ಜಿ
2. ಕಾಳು ಮೆಣಸಿನಪುಡಿ- 1 ಚಮಚ
3. ಕೊತ್ತಂಬರಿ ಪುಡಿ- 2 ಚಮಚ
4. ಉಪ್ಪು- ರುಚಿಗೆ ತಕ್ಕಷ್ಟು
5. ಸ್ವಲ್ಪ ಕರಿಬೇವು
6. ಸಾಸಿವೆ- ಒಗ್ಗರಣೆಗೆ
7. ಅರಿಶಿಣ ಪುಡಿ
8. ಅಡುಗೆ ಎಣ್ಣೆ
9. ಈರುಳ್ಳಿ – 2
10. ಹಸಿ ಮೆಣಸಿನಕಾಯಿ -3
11. ಸ್ವಲ್ಲ ಬೆಳ್ಳುಳ್ಳಿ
12. ಶುಂಠಿ ಪೇಸ್ಟ್ – ಅರ್ಧ ಚಮಚ
13. ಜೀರಿಗೆ ಪುಡಿ – ಅರ್ಧ ಚಮಚ
14. ಕಾನ್ ಫ್ಲವರ್ ಹಿಟ್ಟು
Advertisement
Advertisement
ಮಾಡುವ ವಿಧಾನ:
* ಮೊದಲು ಚಿಕನ್ ಚೆನ್ನಾಗಿ ತೊಳೆದು ಕಾನ್‍ಫ್ಲವರ್ ಹಿಟ್ಟಿನಲ್ಲಿ ಚಿಕನ್ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಕಾದ ಎಣ್ಣೆಯ ಬಾಣಲೆಯಲ್ಲಿ ಫ್ರೈ ಮಾಡಿಕೊಳ್ಳಬೇಕು.
* ಕಾಳು ಮೆಣಸು, ಅರಿಶಿಣ ಹಾಗೂ ಜೀರಿಗೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ.
* ನಂತರ ಪ್ಯಾನ್ ಬಿಸಿ ಮಾಡಿ ಅದಕ್ಕೆ ಎರಡು ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಕರಿಬೇವಿನ ಎಲೆ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ಬಳಿಕ ಈರುಳ್ಳಿ, ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಹಾಕಿ ಕಂದು ಬಣ್ಣ ಬರುವರೆಗೂ ಫ್ರೈ ಮಾಡಿ.
* ಕಾನ್‍ಫ್ಲವರ್ ನಲ್ಲಿ ಕೋಟ್ ಮಾಡಿಟ್ಟ ಚಿಕನ್ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಇತ್ತ ಮಿಶ್ರಣ ಮಾಡಿಕೊಂಡ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಫ್ರೈ ಮಾಡಿ.
* ಸ್ವಲ್ಪ ನಿಂಬೆ ರಸ ಹಾಕಿ ಫ್ರೈ ಮಾಡಿದರೆ ಚಿಕನ್ ಪೆಪ್ಪರ್ ಡ್ರೈ ರೆಡಿ.