ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಉಪಚುನಾವಣೆಯ ಕಾವು ಹೆಚ್ಚಾಗಿದೆ. ಸಾಮಾನ್ಯವಾಗಿ ಚುನಾವಣೆಯಲ್ಲಿ ರಾಜಕೀಯ ಬಾಡೂಟ ಹಾಕಿಸುತ್ತಾರೆ. ಆದರೆ ಈ ಬಾರಿ ಬಾಡೂಟನೇ ರಾಜಕೀಯ ನಾಯಕರುಗಳ ಕೈ ಸುಡುತ್ತಿದೆ.
ಚುನಾವಣೆ ಬರುತ್ತಿದ್ದಂತೆ ರಾಜಕೀಯ ನಾಯಕರು ಮತದಾರರನ್ನು ಸೆಳೆಯುವುದಕ್ಕೆ ಮೊದಲ ಪ್ರಯತ್ನನೇ ಬಾಡೂಟ ಹಾಕಿಸುವುದು. ಹೀಗಾಗಿ ಎಲ್ಲೆಡೆ ಬಾಡೂಟದ ಭರಾಟೆ ಕೂಡ ಜೋರಾಗಿದೆ. ಬಾಡೂಟದಲ್ಲಿ ಚೀಪ್ ರೇಟ್‍ನ ಚಿಕನ್ ಮತ್ತು ಮಟನ್ ನೀಡಿ ಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಆದರೆ ಇದೇ ಬಾಡೂಟ ರಾಜಕೀಯ ನಾಯಕರ ಕೈ ಸುಡುತ್ತಿದ್ದು, ಚಿಕನ್ ಹಾಗೂ ಮಟನ್ ರೇಟ್ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಮಾಂಸದ ದರ ಏರಿಕೆ ಆಗಿದೆ.
Advertisement
Advertisement
ಕಳೆದ ತಿಂಗಳು ಕೆ.ಜಿಗೆ 113 ರೂ. ಇದ್ದ ಚಿಕನ್ ದರ 180 ರೂ. ಆಗಿದೆ. ಹಾಗೆಯೇ ಮಟನ್ 520 ರೂ. ಯಿಂದ 560 ರೂ. ಜಿಗಿದಿದೆ. ಅಂತೆಯೇ ಒಂದು ಮೊಟ್ಟೆ 4 ರೂ.ಯಿಂದ 6 ರೂ.ಗೆ ಏರಿಕೆಯಾಗಿದೆ. ಮಟನ್ ನಲ್ಲಿ ಅಷ್ಟೇನೂ ಹೆಚ್ಚಳವಾಗದಿದ್ರೂ, ಚಿಕನ್ ನಲ್ಲಿ 80 ರೂ. ಹೆಚ್ಚಾಗಿದ್ದು, ನಾನ್ ವೆಜ್ ಪ್ರಿಯರ ನಿದ್ದೆಗೆಡಿಸಿದೆ. ಈ ವಾರದಲ್ಲೇ ಚಿಕನ್ 200 ರೂ. ಹಾಗೂ ಮಟನ್ 600 ರೂ. ಗಡಿ ದಾಟುವ ಸಾಧ್ಯತೆ ಇದೆ.
Advertisement
Advertisement
ಬೆಂಗಳೂರಿನಲ್ಲಿ ದಿನವೊಂದಕ್ಕೆ 90 ಟನ್‍ಗಿಂತ ಹೆಚ್ಚು ಕೋಳಿ ಮಾರಾಟವಾಗುತ್ತಿದೆ. ಆದರೆ ಚುನಾವಣೆ ಎಲೆಕ್ಷನ್ ಹೊತ್ತಿನಲ್ಲಿ, ದಿನವೊಂದಕ್ಕೆ 150 ಟನ್‍ಗಿಂತಲೂ ಹೆಚ್ಚು ಮಾರಾಟವಾಗುತ್ತದೆ. ಬೆಲೆ ಎಷ್ಟಾದರೂ ಚಿಕನ್ ಬೇಕೇ ಬೇಕು ಎಂದು ನಾನ್ ವೆಜ್ ಪ್ರಿಯರು ಹೇಳುತ್ತಿದ್ದಾರೆ.
ಬೆಲೆ ಏರಿಕೆ ಯಾಕೆ?
– ಈ ವರ್ಷ ಸುರಿದ ಭಾರೀ ಮಳೆಯಿಂದಾಗಿ ಅನೇಕ ಕೋಳಿಫಾರಂಗಳು ಜಲಾವೃತವಾಗಿದ್ದು, ಬೇಡಿಕೆಯಷ್ಟು ಪೂರೈಕೆ ಇಲ್ಲ.
– ಕ್ರಿಸ್‍ಮಸ್ ಹಾಗೂ ಹೊಸ ವರ್ಷದಲ್ಲಿ ಕೇಕ್ ಬಳಕೆ ಹೆಚ್ಚಾಗಿದ್ದು, ಮೊಟ್ಟೆಯ ಬೇಡಿಕೆ ಹೆಚ್ಚಾಗಿದೆ.
– ಈಗ ಚಿಕ್ಕ ಚಿಕ್ಕ ಕೋಳಿಗಳಿದ್ದು, ಬಲಿಷ್ಟವಾಗಲೂ ಒಂದು ತಿಂಗಳಾದರೂ ಬೇಕು.