Connect with us

Latest

ಛತ್ತೀಸ್‍ಗಢದಲ್ಲಿ ಅರ್ಧ ಸುಟ್ಟ ಮಹಿಳೆ ಶವ ಪತ್ತೆ

Published

on

ರಾಯ್‍ಪುರ್: ತೆಲಂಗಾಣದ ಪಶುವೈದ್ಯೆ ಪ್ರಕರಣದ ಕಿಚ್ಚು ಹಾರುವ ಮುನ್ನವೇ ಛತ್ತೀಸ್‍ಗಢದ ರಾಜ್‍ಪುರ್ ಜಿಲ್ಲೆಯಾ ಮುರ್ಕಾ ಗ್ರಾಮದಲ್ಲಿ ಅರ್ಧ ಸುಟ್ಟ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತೆಲಂಗಾಣದ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿ ಅವರ ದೇಹವನ್ನು ಪೆಟ್ರೋಲ್ ಹಾಕಿ ಸುಡಲಾಗಿತ್ತು, ಈ ಪ್ರಕರಣ ಇಡೀ ಭಾರತವನ್ನೆ ನಡುಗಿಸಿತ್ತು. ಹೀಗಿರುವಾಗ ಛತ್ತೀಸ್‍ಗಡದಲ್ಲಿ ಇನ್ನೊಂದು ಅರ್ಧ ಸುಟ್ಟ ಮಹಿಳೆಯ ಶವ ಪತ್ತೆಯಾಗಿದೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಬಲರಾಂಪುರ ಎಸ್ಪಿ ಟಿ.ಆರ್ ಕೋಶಿಮಾ ಅವರು, ಇಂದು ಅರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳಾ ಶವವೊಂದು ಸಿಕ್ಕಿದ್ದು, ಅದನ್ನು ಗುರುತಿಸುವ ಪ್ರಯತ್ನ ಮಾಡುತ್ತಿದ್ದೇವೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಅದರ ವರದಿ ಇನ್ನೂ ಬಂದಿಲ್ಲ. ಆದ್ದರಿಂದ ಮಹಿಳೆಯನ್ನು ಲೈಂಗಿಕವಾಗಿ ಕಿರುಕುಳ ಕೊಟ್ಟ ಕೊಲೆ ಮಾಡಿದ್ದಾರಾ ಇಲ್ಲವಾ ಎಂಬುದು ನಮಗೆ ಇನ್ನೂ ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ.

ತೆಲಂಗಾಣದ ಪಶುವೈದ್ಯೆಯ ನಂತರ ಈ ರೀತಿಯ ಎರಡು ಮಹಿಳಾ ದೇಹಗಳು ಸುಟ್ಟ ರೀತಿಯಲ್ಲಿ ದೊರಕಿವೆ. ಪ್ರಿಯಾಂಕ ಮೃತದೇಹ ಸಿಕ್ಕ ಪ್ರದೇಶದಲ್ಲೇ ಇನ್ನೊಂದು 35 ವರ್ಷದ ಮಹಿಳಾ ಶವ ಸುಟ್ಟ ರೀತಿಯಲ್ಲಿ ಸಿಕಿತ್ತು. ಆದರೆ ತನಿಖೆಯ ನಂತರ ಅದು ಕೊಲೆ ಅಲ್ಲ ಆತ್ಮಹತ್ಯೆ ಎಂದು ತಿಳಿದುಬಂದಿತ್ತು. ಈಗ ಛತ್ತೀಸ್‍ಗಡದಲ್ಲಿ ಮೊತ್ತೊಂದು ಮೃತದೇಹ ಸಿಕ್ಕಿದ್ದು, ಪ್ರಾಥಮಿಕ ತನಿಖೆಯಲ್ಲಿ ಈ ಶವವನ್ನು ಬೇರೆ ಕಡೆಯಿಂದ ತಂದು ಇಲ್ಲಿ ಸುಟ್ಟಿದ್ದಾರೆ ಎಂದು ತಿಳಿದು ಬಂದಿದೆ.

26 ವರ್ಷದ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮಹ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳನ್ನು 14 ದಿನಗಳ ಕಾಲ ರಿಮ್ಯಾಂಡ್‍ನಲ್ಲಿ ಇರಿಸುವಂತೆ ಕೋರ್ಟ್ ಆದೇಶಿಸಿದೆ.

ಈ ವಿಚಾರವಾಗಿ ದೇಶದದ್ಯಾಂತ ಪ್ರತಿಭಟನೆ ನಡೆಯುತ್ತಿದ್ದು, ಸೆಲೆಬ್ರಿಟಿಗಳು ಸೇರಿದಂತೆ ಹಲವಾರು ಪ್ರಿಯಾಂಕ ಸಾವಿನ ಪ್ರಕರಣವನ್ನು ಕಂಡಿಸಿದ್ದಾರೆ. ಈ ವಿಚಾರವಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿ ಹೈದರಾಬಾದ್‍ನಲ್ಲಿ ನಡೆದದ್ದು ಸಂಪೂರ್ಣವಾಗಿ ನಾಚಿಕೆಗೇಡಿನ ಸಂಗತಿ. ಸಮಾಜವಾಗಿ ನಾವು ಅಧಿಕಾರ ವಹಿಸಿಕೊಂಡು ಈ ಅಮಾನವೀಯ ದುರಂತಗಳಿಗೆ ಅಂತ್ಯ ಹಾಡುವ ಸಮಯ ಇದು ಎಂದಿದ್ದಾರೆ.

ಹೈದರಾಬಾದ್‍ನಲ್ಲಿ ಪ್ರಿಯಾಂಕಾರೆಡ್ಡಿ ಆಗಿರಲಿ, ತಮಿಳುನಾಡಿನಲ್ಲಿ ರೋಜಾ ಆಗಿರಲಿ ಅಥವಾ ರಾಂಚಿಯಲ್ಲಿ ಕಾನೂನು ವಿದ್ಯಾರ್ಥಿ ಸಾಮೂಹಿಕ ಅತ್ಯಾಚಾರವಾಗಿರಲಿಲ್ಲ. ಈ ರೀತಿಯ ಕೃತ್ಯಗಳಿಂದ ನಾವು ಸಮಾಜವಾಗಿ ಮಾನವಿಯತೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ತೋರುತ್ತದೆ. ನಿರ್ಭಯಾ ಪ್ರಕರಣ ನಡೆದು 7 ವರ್ಷಗಳು ಕಳೆದಿದೆ. ಆದರೆ ನಮ್ಮ ನೈತಿಕತೆ ಬದಲಾಗಿಲ್ಲ. ಇದನ್ನು ನಿಲ್ಲಿಸಲು ನಮಗೆ ಕಠಿಣ ಕಾನೂನುಗಳು ಬೇಕಾಗುತ್ತವೆ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *