ರಾಯ್ಪುರ್: ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನನ್ನು ಹೊತ್ತುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಮೂಲಕ ಸೈನಿಕರು ಮಾನವೀಯತೆ ಮೆರೆದಿದ್ದಾರೆ.
ಚತ್ತೀಸ್‍ಗಢದ ದಾಂತೇವಾಡ ಪ್ರದೇಶದಲ್ಲಿರುವ ಗುಮೋದಿ ಗ್ರಾಮದ 13 ವರ್ಷದ ಬಾಲಕ ಅನಾರೋಗ್ಯದಿಂದ ಬಳಲುತ್ತಿದ್ದ. ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಸಿಆರ್‌ಪಿಎಫ್ 231 ಬೆಟಾಲಿಯನ್ ಪಡೆಯ ಸೈನಿಕರು ಬಾಲಕನನ್ನು ನೋಡಿದ್ದಾರೆ. ಆತನ ಸ್ಥಿತಿಯನ್ನು ಅರಿತ ಯೋಧರು ಮಂಚವನ್ನು ಹಗ್ಗದ ಸಹಾಯದಿಂದ ಉದ್ದದ ಕಟ್ಟಿಗೆ ಕಟ್ಟಿದ್ದಾರೆ. ಬಳಿಕ ಇಬ್ಬರು ಯೋಧರು ಅದನ್ನು ಹೆಗಲ ಮೇಲೆ ಇಟ್ಟುಕೊಂಡು ಬಾಲಕನನ್ನು ಕ್ಯಾಂಪ್‍ಗೆ ಸಾಗಿಸಿದ್ದಾರೆ.
Advertisement
Chhattisgarh: While patrolling on June 6, troops of 231 battalion CRPF found a severely ill 13-year-old boy in Gumodi village.The troops carried the boy on a cot for 8 km & got him treated in their camp Kondasavli in Sukma.He was found to be suffering from jaundice; is stable now pic.twitter.com/MiFKBss5EY
— ANI (@ANI) June 7, 2019
Advertisement
ಗುಮೋದಿ ಗ್ರಾಮದಿಂದ 8 ಕಿ.ಮೀ. ದೂರದಲ್ಲಿದ್ದ ಕ್ಯಾಂಪ್‍ವರೆಗೂ ಯೋಧರು ಬಾಲಕನನ್ನು ಹೊತ್ತುಕೊಂಡು ಸಾಗಿದ್ದಾರೆ. ಸೈನಿಕರ ಹಿಂದೆ ಬಾಲಕನ ಸಂಬಂಧಿಕರು, ಸ್ನೇಹಿತರು ಕೂಡ ಹೆಜ್ಜೆಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯೋಧರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
Advertisement
ಬಾಲಕನಿಗೆ ಕಾಮಾಲೆ ಕಾಯಿಲೆ ಕಾಣಿಸಿಕೊಂಡಿತ್ತು. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಿಕಿತ್ಸೆ ಮುಂದುವರಿದಿದೆ ಎಂದು ವರದಿಯಾಗಿದೆ.