ರಾಯ್ಪುರ: ಮುಂದಿನ ಹಣಕಾಸು ವರ್ಷದಿಂದ ನಿರುದ್ಯೋಗಿ ಯುವಕರಿಗೆ (Unemployed Youth) ಮಾಸಿಕ ಭತ್ಯೆ ನೀಡುವುದಾಗಿ ಛತ್ತಿಸ್‍ಗಢದ (Chhattisgarh) ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಭರವಸೆ ನೀಡಿದರು.
ಬಸ್ತಾರ್ ಜಿಲ್ಲೆಯ ಪ್ರಧಾನ ಕಚೇರಿ ಜಗದಲ್‍ಪುರದ ಲಾಲ್‍ಬಾಗ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಮಾತನಾಡಿದ ಅವರು, ಗುಡಿ ಕೈಗಾರಿಕೆಯನ್ನು ಬಲಪಡಿಸಲು ರಾಜ್ಯದಲ್ಲಿ ಗ್ರಾಮೀಣ ಕೈಗಾರಿಕೆ ನೀತಿಯನ್ನು ರೂಪಿಸುವುದಾಗಿ ಘೋಷಿಸಿದರು.
Advertisement
Advertisement
ಕೈಗಾರಿಕಾ ಇಲಾಖೆ ಅಭಿವೃದ್ಧಿಪಡಿಸಿರುವ ಕೈಗಾರಿಕಾ ಪ್ರದೇಶಗಳಲ್ಲಿನ ಕಾರ್ಖಾನೆಗಳಿಗೆ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಅಂತಿಮ ಹಂತದಲ್ಲಿ ಕೇಂದ್ರ ಬಜೆಟ್ – ಹಲ್ವಾ ಹಂಚಿದ ನಿರ್ಮಲಾ ಸೀತಾರಾಮನ್
Advertisement
Advertisement
ಮೂರು ವರ್ಷಗಳ ಅವಧಿಗೆ ಛತ್ತೀಸ್‍ಗಢ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿರುವ ಕಟ್ಟಡ ಕಾರ್ಮಿಕರಿಗೆ ಅವರ ಮನೆ ನಿರ್ಮಿಸಿಕೊಳ್ಳಲು 50 ಸಾವಿರ ರೂ.ಗಳ ಅನುದಾನ ನೀಡಲಾಗುವುದು ಎಂದರು. ಇದನ್ನೂ ಓದಿ: ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಉದ್ಘಾಟಿಸಿದ ಬೊಮ್ಮಾಯಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k