ಭೋಪಾಲ್: ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲಿದ್ದ ಜಾನಪದ ನೃತ್ಯಗಾರ್ತಿ ಜೊತೆ ಮಧ್ಯಪ್ರದೇಶದ (Madhya Pradesh) ಛತ್ತರ್‍ಪುರ (Chhatarpur) ಜಿಲ್ಲೆಯ ಪುರಸಭೆಯ ಕಾರ್ಯಕರ್ತನೊಬ್ಬ ಅನುಚಿತವಾಗಿ ವರ್ತಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ನಂತರ ನೃತ್ಯಗಾರ್ತಿಯರು ಕಾರ್ಯಕರ್ತ ಮುಖೇಶ್ ಶ್ರೀನಿವಾಸ್ ವಿರುದ್ಧ ಛತ್ತರ್‍ಪುರ ಪುರಸಭೆಗೆ (Chhatarpur Municipality) ದೂರು ಸಲ್ಲಿಸಿದ್ದಾರೆ. ದೂರಿನ ಮೇರೆಗೆ ಪಾಲಿಕೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದು, ಇದೀಗ ಆರೋಪಿ ಮುಖೇಶ್ ಶ್ರೀನಿವಾಸ್ ಅನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ನಗರಪಾಲಿಕೆ ಸಿಎಂಒ ಓಂಪಾಲ್ ಸಿಂಗ್ ಭಡೋರಿಯಾ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಸ್ಟುಡಿಯೋ ಕ್ಲೀನ್ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಫೋಟೋಗ್ರಾಫರ್‌ಗಳಿಬ್ಬರ ದುರ್ಮರಣ
Advertisement
Advertisement
ಅಕ್ಟೋಬರ್ 18 ರಂದು ಮುನ್ಸಿಪಲ್ ಕಾರ್ಪೊರೇಷನ್ ಆವರಣದಲ್ಲಿ ವಾರ್ಷಿಕ ಜಲ ವಿಹಾರ ಜಾತ್ರೆ ವೇಳೆ ಈ ಘಟನೆ ನಡೆದಿದ್ದು, ವೇದಿಕೆ ಮೇಲಿದ್ದ ಜಾನಪದ ನೃತ್ಯಗಾರ್ತಿಯೊಂದಿಗೆ ನಗರಸಭೆ ಸಿಬ್ಬಂದಿ ಮುಖೇಶ್ ಶ್ರೀನಿವಾಸ್ ಅಸಭ್ಯವಾಗಿ ವರ್ತಿಸಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನರ್ತಕಿಯರೊಂದಿಗೆ ಹೀಗೆ ನಡೆದುಕೊಂಡಿದ್ದರಿಂದ ಸಂಸ್ಥೆಯ ಪ್ರತಿಷ್ಠೆಗೆ ನನ್ನಿಂದ ಧಕ್ಕೆ ಉಂಟಾಗಿದೆ ಎಂದು ಮುಖೇಶ್ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಿಂದ ನಾವು ವಿಚಲಿತರಾಗಿದ್ದೇವೆ – ಪ್ರಹ್ಲಾದ್ ಜೋಶಿ