ಕೋಲ್ಕತ್ತಾ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಎಲ್ಲ 5 ದಿನವೂ ಬ್ಯಾಟಿಂಗ್ ನಡೆಸಿ ವಿಶೇಷ ಸಾಧನೆ ಮಾಡಿದ್ದಾರೆ.
ಈ ಮೂಲಕ ಎಲ್ಲ 5 ದಿನಗಳ ಬ್ಯಾಟಿಂಗ್ ನಡೆಸಿದ ಮೂರನೇ ಭಾರತೀಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಭಾರತದ ಪರವಾಗಿ ಜಯಸಿಂಹ ಮತ್ತು ಪ್ರಸ್ತುತ ಕೋಚ್ ಆಗಿರುವ ರವಿಶಾಸ್ತ್ರಿ 5 ದಿನ ಬ್ಯಾಟಿಂಗ್ ನಡೆಸಿದ್ದರು.
Advertisement
ಜಯಸಿಂಹ ಅವರು 1960 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಾಧನೆ ನಿರ್ಮಿಸಿದ್ದರೆ, ರವಿಶಾಸ್ತ್ರಿ 1984 ರಲ್ಲಿ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ಮೂರು ಬ್ಯಾಟ್ಸ್ ಮನ್ ಗಳ ಸಾಧನೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲೇ ನಡೆದಿದೆ ಎನ್ನುವುದು ವಿಶೇಷ.
Advertisement
5 ದಿನಗಳ ಕಾಲ ಬ್ಯಾಟಿಂಗ್ ನಡೆಸಿದ ಆಟಗಾರರು:
ಎಂಎಲ್ ಜಯಸಿಂಹ(ಭಾರತ), ಕಿಮ್ ಹಗ್ಸ್(ಆಸ್ಟ್ರೇಲಿಯಾ), ಅಲನ್ ಲಾಂಬ್( ಇಂಗ್ಲೆಂಡ್), ರವಿಶಾಸ್ತ್ರಿ, ಆಡ್ರಿಯನ್ ಗ್ರಿಫಿತ್(ವೆಸ್ಟ್ ಇಂಡೀಸ್), ಆಂಡ್ರ್ಯೂ ಫ್ಲಿಂಟಾಫ್(ಇಂಗ್ಲೆಂಡ್), ಚೇತೇಶ್ವರ ಪೂಜಾರ
Advertisement
ಮೊದಲ ದಿನ ಮಳೆ ಬಂದಿದ್ದ ಕಾರಣ ಮಧ್ಯಾಹ್ನ ಟೆಸ್ಟ್ ಆರಂಭವಾಗಿತ್ತು. ಹೀಗಾಗಿ 18 ರನ್ ಗಳಿಸಿದ್ದ ಪೂಜಾರಾ ಎರಡನೇ ದಿನ 47 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದರು. ಮೂರನೇ ದಿನ 52 ರನ್ ಗಳಿಸಿ ಪೂಜಾರಾ ಔಟಾದರು. ನಾಲ್ಕನೇಯ ದಿನ ಲಂಕಾ 294 ರನ್ ಗಳಿಗೆ ಅಲೌಟ್ ಆಗಿದ್ದರಿಂದ ಭಾನುವಾರ ಪೂಜಾರಾ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಹೀಗಾಗಿ 2 ರನ್ ಗಳಿಸಿದ್ದ ಪೂಜಾರ 5ನೇ ದಿನ 22 ರನ್ ಗಳಿಸಿ ಔಟಾದರು.
Advertisement
ಇದನ್ನೂ ಓದಿ: ಲಂಕಾ ವಿರುದ್ಧ ಟೀಂ ಇಂಡಿಯಾ ವೇಗದ ಬೌಲರ್ ಗಳಿಂದ ವಿಶೇಷ ಸಾಧನೆ