– ಕರ್ನಾಟಕದಿಂದ 1 ಸಾವಿರಕ್ಕೂ ಹೆಚ್ಚು ಜನ ಪ್ರಯಾಣ
ಚೆನ್ನೈ: ಮೈಸೂರಿನಿಂದ ದರ್ಭಾಂಗ್‌ಗೆ ಪ್ರಯಾಣಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 3 ಬೋಗಿಗಳು ಹೊತ್ತಿ ಉರಿದವು. ಅವಘಡದಿಂದ ಪಾರಾಗಲು ಜನರು ರೈಲಿನ ಕಿಟಕಿಯಿಂದ ಹೊರಬಂದರು.
ಕರ್ನಾಟಕದಿಂದ 1 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು. ರಾಜ್ಯದ ಪ್ರಯಾಣಿಕರು ಇರುವ ಬೋಗಿಗೂ ಹಾನಿಯಾಗಿದೆ. ಬಿಹಾರ ಕಡೆ ಹೊರಟಿದ್ದ ಸುರಕ್ಷಿತ ಪ್ರಯಾಣಿಕರಿಗೆ ಬದಲಿ ರೈಲಿನ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಲಾಗಿದೆ.
ರೈಲಿನಲ್ಲಿದ್ದ ಇತರೆ ಪ್ರಯಾಣಿಕರಿಗೆ ಬದಲಿ ರೈಲಿನ ವ್ಯವಸ್ಥೆ ಮಾಡಲಾಗುತ್ತಿದೆ. ಅಪಘಾತದಿಂದ ಹಲವು ಬೋಗಿಗಳು ಹಳಿ ತಪ್ಪಿವೆ. ರಕ್ಷಣಾ ಸಿಬ್ಬಂದಿ, ರೈಲಿನ ಕಿಟಕಿಯ ಮೂಲಕ ಪ್ರಯಾಣಿಕರನ್ನ ಹೊರಕರೆತಂದು ರಕ್ಷಣೆ ಮಾಡುತ್ತಿದ್ದಾರೆ ಎಂದು ರೈಲ್ವೆ ಮಂಡಳಿ ಅಧಿಕಾರಿ ದಿಲೀಪ್ ಕುಮಾರ್ ತಿಳಿಸಿದ್ದಾರೆ.
ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗಳಿಗೆ ರವಾನಿಸಲು ಸ್ಥಳದಲ್ಲಿ ಅಂಬುಲೆನ್ಸ್, ವೈದ್ಯಕೀಯ ಸಿಬ್ಬಂದಿ ಬೀಡುಬಿಟ್ಟಿದ್ದರು. ಪ್ರಯಾಣಿಕರಿಗೆ ಸ್ಥಳೀಯ ಸಮುದಾಯ ಭವನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. 2 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಸಮುದಾಯ ಭವನದಲ್ಲಿ ಇರಲು ವ್ಯವಸ್ಥೆ ಕಲ್ಪಿಸಲಾಗಿದೆ.
ಸದ್ಯದ ಮಾಹಿತಿ ಪ್ರಕಾರ 50 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಸಾವಿನ ಬಗ್ಗೆ ಈವರೆಗೂ ಮಾಹಿತಿ ಇಲ್ಲ. ಹೊತ್ತಿ ಉರಿದ ಎರಡು ಬೋಗಿಗಳ ಸಮೀಪ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಬೆಂಕಿಗೆ ಆಹುತಿಯಾದ ಬೋಗಿಗಳಲ್ಲಿ ಪ್ರಯಾಣಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.