ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ಟೆಕ್ಕಿ – ಟ್ರಕ್ ಹರಿದು ಸ್ಥಳದಲ್ಲೇ ಸಾವು

Public TV
2 Min Read
chennai girl

ಚೆನ್ನೈ: ರಸ್ತೆ ಗುಂಡಿಯನ್ನು (Pothole) ತಪ್ಪಿಸಲು ಪ್ರಯತ್ನಿಸಿದ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಟೆಕ್ಕಿಯೊಬ್ಬರು (Techie) ಟ್ರಕ್‍ಗೆ (Truck) ಸಿಲುಕಿ ಮೃತಪಟ್ಟ ಘಟನೆ ಚೆನ್ನೈನಲ್ಲಿ (Chennai) ನಡೆದಿದೆ.

ಶೋಭನಾ (22) ಮೃತ ಮಹಿಳೆ. ಮಧುರವಾಯಲ್ ಬಳಿ ಈ ಘಟನೆ ನಡೆದಿದೆ. ಶೋಭಾನಾ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ನೀಟ್ ಕೋಚಿಂಗ್ ತರಗತಿಗೆ ತನ್ನ ಸಹೋದರನನ್ನು ಬಿಡಲು ತೆರಳಿದ್ದರು.

ಈ ವೇಳೆ ಮಧುರವಾಯಲ್ ಬಳಿ ರಸ್ತೆ ಗುಂಡಿ ತಪ್ಪಿಸಲು ಪ್ರಯತ್ನಿಸಿದ್ದಾರೆ. ಆದರೆ ಆಕೆ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಟ್ರಕ್‍ವೊಂದು ಹರಿದು ಶೋಭನಾ ಸಾವನ್ನಪ್ಪಿದ್ದಾಳೆ. ಆದರೆ ಆಕೆಯ ಸಹೋದರ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಇದನ್ನೂ ಓದಿ: ತಲೆಬುರುಡೆ ಒಡೆದಿತ್ತು, ಪಕ್ಕೆಲುಬು ಕಾಣಿಸ್ತಿತ್ತು- ಅಂಜಲಿ ಶವಪರೀಕ್ಷೆ ಬಳಿಕ ಆಘಾತಕಾರಿ ಮಾಹಿತಿ

ಪೂನಮಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಶೋಭನಾಳ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಪೋರೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಪಘಾತ ಸ್ಥಳದಿಂದ ಪರಾರಿಯಾಗಿದ್ದ ಟ್ರಕ್ ಚಾಲಕ ಮೋಹನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಮನೆಯಲ್ಲಿ ಸಿದ್ದರಾಮಯ್ಯ ಇಲಿ, ಬೆಕ್ಕು, ಜಿರಳೆ ಆಗಿರ್ತಾರೆ: ಶ್ರೀರಾಮುಲು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *