ಚೆನ್ನೈ: 22 ವರ್ಷದ ಗರ್ಲ್ ಫ್ರೆಂಡ್‍ಗೆ ಗಿಫ್ಟ್ ನೀಡಲು 40 ವರ್ಷದ ವ್ಯಕ್ತಿಯೋರ್ವ ತನ್ನ ಹೆಂಡತಿಯ ಆಭರಣವನ್ನೇ ಕದ್ದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಆರೋಪಿಯನ್ನು ಶೇಖರ್ ಎಂದು ಗುರುತಿಸಲಾಗಿದ್ದು, ಈತ ತನ್ನ ಸಹೋದರ ರಾಜೇಶ್ ಕುಟುಂಬ ಮತ್ತು ತಾಯಿಯೊಂದಿಗೆ ಚೆನ್ನೈನ ಪೂನಮಲ್ಲಿ ಎಂಬ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಎರಡು ವರ್ಷದ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆ ಶೇಖರ್‌ನನ್ನು ಪತ್ನಿ ತೊರೆದಿದ್ದರು. ಇದನ್ನೂ ಓದಿ: ಶ್ರೀಲಂಕಾದೊಂದಿಗೆ ತನ್ನ ವಿನಿಮಯಕ್ಕೆ ತೊಂದರೆ ಮಾಡುವುದನ್ನು ನಿಲ್ಲಿಸಿ – ಭಾರತಕ್ಕೆ ಚೀನಾ ಮನವಿ
ಇತ್ತೀಚೆಗಷ್ಟೇ ಚಿನ್ನಾಭರಣ ವಾಪಸ್ ಪಡೆಯಲು ಮನೆಗೆ ಬಂದಿದ್ದ ವೇಳೆ ಚಿನ್ನಾಭರಣ ಕಾಣೆಯಾಗಿದ್ದನ್ನು ಕಂಡು ಶೇಖರ್ ಪತ್ನಿ ಶಾಕ್ ಆಗಿದ್ದಾರೆ. ನಂತರ ಈ ಕುರಿತಂತೆ ಆಕೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದಾಗ ಶೇಖರ್ ತನ್ನ ಪತ್ನಿಯ 300 ಸಾವರಿನ್ ಚಿನ್ನಾಭರಣ, ತಾಯಿಗೆ ಸೇರಿದ 200 ಸಾವರಿನ್ ಚಿನ್ನಾಭರಣ ಮತ್ತು 50 ಸಾವರಿನ್ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿರುವುದು ಪತ್ತೆಯಾಗಿದೆ.
ಈ ಎಲ್ಲಾ ಚಿನ್ನಾಭರಣವನ್ನು 22 ವರ್ಷದ ಸ್ವಾತಿ ಎಂಬ ಯುವತಿಗೆ ಶೇಖರ್ ಉಡುಗೊರೆಯಾಗಿ ನೀಡಿದ್ದು, ಆಕೆಯೊಂದಿಗೆ ಸಂಬಂಧ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಶೇಖರ್ ಪ್ರೇಯಸಿಗೆ ಕಾರನ್ನು ಖರೀದಿಸಿ ಕೂಡ ನೀಡಿದ್ದಾರೆ. ಇದೀಗ ಪೊಲೀಸರು ಅದನ್ನು ವಶಪಡಿಸಿಕೊಂಡು, ವ್ಯಕ್ತಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಅವರ ತಿರಂಗಾ ಡಿಪಿ ಕರೆಯನ್ನು ಆರ್‌ಎಸ್‌ಎಸ್ ತಿರಸ್ಕರಿಸಿದೆ – ಬಿಜೆಪಿ ಕಾಲೆಳೆದ ಕಾಂಗ್ರೆಸ್