ಕಾರವಾರ: ಆಹಾರ ಅರಸಿ ಬಂದಿದ್ದ ಚಿರತೆ ಬೋನಿನಲ್ಲಿ ಇದ್ದ ನಾಯಿ ಹಿಡಿಯಲು ಹೋಗಿ ಬೋನಿನಲ್ಲೇ ಬಂಧಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಿಮಾನಿ ಗ್ರಾಮದಲ್ಲಿ ನಡೆದಿದೆ.
ರಾತ್ರಿ ನಾಯಿ ಹಿಡಿಯಲು ಬಂದಿದ್ದ ಚಿರತೆಯನ್ನು ನಾಯಿ ಬೋನಿನೊಳಗೆ ಹೋದದ್ದನ್ನ ಗಮನಿಸಿದ ಮನೆಯ ಮಾಲೀಕರು ತಕ್ಷಣ ಬೋನನ್ನು ಲಾಕ್ ಮಾಡಿದ್ದಾರೆ. ಅದೃಷ್ಟವಶಾತ್ ಬೋನಿನಲ್ಲಿ ಇದ್ದ ನಾಯಿ ತಪ್ಪಿಸಿಕೊಂಡಿದ್ದು, ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮುನ್ಸೂಚನೆ ನೀಡದೆ ದೇವಸ್ಥಾನಗಳನ್ನು ಏಕಾಏಕಿ ತೆರವುಗೊಳಿಸುತ್ತಿರುವುದು ಖಂಡನೀಯ: ಎಸ್‍ಡಿಪಿಐ
ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಚಿರತೆ ರಕ್ಷಣೆ ಮಾಡಲು ಕಾರ್ಯಾಚರಣೆ ಪ್ರಾರಂಭಿಸಿದ್ದು, ಬೋನಿನ ಸಮೇತ ಚಿರತೆಯನ್ನು ಸೆರೆಹಿಡಿದು ಕುಮಟಾದ ಸ್ಥಳೀಯ ಕಾಡಿನಲ್ಲಿ ಬಿಟ್ಟಿದ್ದಾರೆ. ಇದನ್ನೂ ಓದಿ: ಔರದ್‍ನಲ್ಲಿ ಭೀಕರ ರಸ್ತೆ ಅಪಘಾತ – ಸ್ಥಳದಲ್ಲೇ ಇಬ್ಬರು ಸಾವು